ರಿಲಯನ್ಸ್ ಕ್ಯಾಂಪಾ ಕೋಲಾ ಪಾನೀಯ ಈಗ ಯುಎಇ ಮಾರುಕಟ್ಟೆಗೆ ಪರಿಚಯ - Mahanayaka

ರಿಲಯನ್ಸ್ ಕ್ಯಾಂಪಾ ಕೋಲಾ ಪಾನೀಯ ಈಗ ಯುಎಇ ಮಾರುಕಟ್ಟೆಗೆ ಪರಿಚಯ

reliance campa cola
19/02/2025

Reliance Campa Cola drink– ದುಬೈ/ ಬೆಂಗಳೂರು: ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್ ಸಿಪಿಎಲ್) ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ  ಎಫ್ಎಂಸಿಜಿ ಅಂಗವಾಗಿದ್ದು, ಭಾರತದ ಪಾರಂಪರಿಕ ಬ್ರ್ಯಾಂಡ್ ಆದ ಕ್ಯಾಂಪಾವನ್ನು ಯುಎಇಯಲ್ಲಿ ಪರಿಚಯಿಸಿದೆ. ಗಲ್ ಫುಡ್ ಮೂವತ್ತನೇ ಆವೃತ್ತಿ ಯುಎಇಯಲ್ಲಿ ನಡೆಯುತ್ತಿದ್ದು, ಈ ವೇಳೆ ಪರಿಚಯಿಸಿದೆ. ಅಂದಹಾಗೆ ಗಲ್ ಫುಡ್ ಎಂಬುದು ವಿಶ್ವದಲ್ಲಿಯೇ ಅತಿದೊಡ್ಡ ಆಹಾರ ಹಾಗೂ ಪಾನೀಯ (ಎಫ್ ಅಂಡ್ ಬಿ) ಸೋರ್ಸಿಂಗ್ ಕಾರ್ಯಕ್ರಮ ಆಗಿದೆ. ಈ ಚೊಚ್ಚಲ ಗುರುತು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಆರ್ ಸಿಪಿಎಲ್ ಮೊದಲ ಪ್ರವೇಶವಾಗಿದೆ ಹಾಗೂ ಈ ಪ್ರಾದೇಶಿಕ ಭಾಗಕ್ಕೆ ಆರ್ ಸಿಪಿಎಲ್ ದೀರ್ಘಾವಧಿ ಬದ್ಧತೆಯನ್ನು ಮತ್ತೆ ಖಚಿತಪಡಿಸುತ್ತದೆ.


Provided by

2022ನೇ ಇಸವಿಯಲ್ಲಿ ಆರ್ ಸಿಪಿಎಲ್ ಕ್ಯಾಂಪಾ ಕೋಲಾವನ್ನು ಸ್ವಾಧೀನಪಡಿಸಿಕೊಂಡಿತು. ಆ ನಂತರ 2023ರಲ್ಲಿ ಭಾರತಕ್ಕೆ ಅದನ್ನು ಮರುಪರಿಚಯಿಸಿತು. ಅಂದಹಾಗೆ 1970 ಮತ್ತು 1980ರ ದಶಕಗಳಲ್ಲಿ ಭಾರತದಲ್ಲಿ ಹೆಮ್ಮೆಯ ಸ್ಥಾನಮಾನ ಹೊಂದಿದ್ದ ಪಾರಂಪರಿಕ ಬ್ರ್ಯಾಂಡ್ ಕ್ಯಾಂಪಾ ಕೋಲಾವನ್ನು ಯಶಸ್ವಿಯಾಗಿ ಪುನರುಜ್ಜೀವನಗೊಳಿಸಲಾಗಿದೆ. ಪ್ರಾದೇಶಿಕವಾಗಿ ಪ್ರಮುಖ ಆಹಾರ ಹಾಗೂ ಪಾನೀಯ ಕಂಪನಿಗಳಲ್ಲಿ ಒಂದಾದ ಅಗ್ಥಿಯಾ ಸಮೂಹದ ಸಹಯೋಗದೊಂದಿಗೆ  ಕ್ಯಾಂಪಾ ಕೋಲಾವನ್ನು ಪ್ರಾರಂಭಿಸಲಾಗುತ್ತಿದೆ.

ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಸಿಒಒ ಕೇತನ್ ಮೋದಿ ಮಾತನಾಡಿ, “ಕ್ಯಾಂಪಾದೊಂದಿಗೆ ಯುಎಇ ಮಾರುಕಟ್ಟೆ ಪ್ರವೇಶಿಸುತ್ತಿರುವುದಕ್ಕೆ ಸಂಭ್ರಮಿಸುತ್ತಿದ್ದೇವೆ. ಈ ಬ್ರ್ಯಾಂಡ್ ಐವತ್ತು ವರ್ಷಗಳ ಹಿಂದೆ ಆರಂಭವಾದ ಭಾರತೀಯ ಬ್ರ್ಯಾಂಡ್ ಆಗಿದೆ. ದೀರ್ಘಾವಧಿಗಾಗಿ ನಾವು ಹೂಡಿಕೆ ಮಾಡುತ್ತಾ ಇದ್ದೇವೆ. ಈ ಪ್ರಾದೇಶಿಕ ಭಾಗದಲ್ಲಿ ಬೆಳವಣಿಗೆಗೆ ಬಹಳ ಸಾಧ್ಯತೆಗಳಿವೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನಾವೀನ್ಯತೆಯ ಮತ್ತು ಜಾಗತಿಕ ಗುಣಮಟ್ಟದ ಉತ್ಪನ್ನ ಒದಗಿಸುವ ಹಿನ್ನೆಲೆಯ ದಾಖಲೆ ನಮಗಿದೆ. ನಾವು ಪಾಲುದಾರರ ಜೊತೆಗೆ ಒಟ್ಟಾಗಿ ಬರುತ್ತಿದ್ದೇವೆ, ಯುಎಇನಾದ್ಯಂತ ಗ್ರಾಹಕರಿಗೆ ಪರಿವರ್ತನೆಯ ಪಾನೀಯ ಅನುಭವವನ್ನು ಒದಗಿಸುತ್ತೇವೆ,” ಎಂದಿದ್ದಾರೆ.


Provided by

“ಕ್ಯಾಂಪಾ ಬಹು-ಪೀಳಿಗೆಯ ಪ್ರಸ್ತುತತೆ ಹೊಂದಿದೆ ಮತ್ತು ಮತ್ತೆ ಸುಂದರ ನೆನಪನ್ನು ತರುತ್ತದೆ ಹಾಗೂ ಗ್ರಾಹಕರು ಆ ಅಮೂಲ್ಯ ಕ್ಷಣಗಳನ್ನು ಮರುಪರಿಶೀಲಿಸಲು, ಕ್ಯಾಂಪಾಗೆ ಮರುಜೀವ ನೀಡಲು ಪ್ರೇರೇಪಿಸುತ್ತದೆ. ಕ್ಯಾಂಪಾ ಕೇವಲ ಪಾನೀಯವಲ್ಲ; ಇದು ಪರಂಪರೆಯ ಪುನರುಜ್ಜೀವನ, ಭಾರತದ ಅಭಿರುಚಿ ಮತ್ತು ಇಂದಿನ ಯುವಕರ ಚೈತನ್ಯದ ಸಂಭ್ರಮಾಚರಣೆಯಾಗಿದೆ. ಯುಎಇಯ ಎಲ್ಲ ಗ್ರಾಹಕರಲ್ಲಿ ಅದರ ರಿಫ್ರೆಶ್ ಅಭಿರುಚಿಗೆ ಅಭಿಮಾನಿಗಳ ಹೊಸ ಅಲೆಯನ್ನು ಪರಿಚಯಿಸುತ್ತದೆ ಹಾಗೂ ಭಾರತೀಯ ವಲಸಿಗರಿಗೆ ಮತ್ತೆ ತಮ್ಮ ಬೇರುಗಳ ನೆನಪನ್ನು ಮೆಲುಕು ಹಾಕುವಂತೆ ಮಾಡುತ್ತದೆ ಎಂಬ ವಿಶ್ವಾಸ ನಮಗಿದೆ,” ಎಂದು ಮೋದಿ ಹೇಳಿದ್ದಾರೆ.

ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿದ ಅಗ್ಥಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲನ್ ಸ್ಮಿತ್, “ಕ್ಯಾಂಪಾ ಕೋಲಾವನ್ನು ಯುಎಇಗೆ ತರುವುದಕ್ಕೆ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ಈ ಐಕಾನಿಕ್ ಬ್ರ್ಯಾಂಡ್ ಅನೇಕರಿಗೆ ಸುಂದರವಾದ ನೆನಪುಗಳನ್ನು ಹೊಂದಿದೆ ಮತ್ತು ಇದು ಯುಎಇಯಲ್ಲಿರುವ ದೊಡ್ಡ ಸಂಖ್ಯೆಯ ಭಾರತೀಯ ವಲಸಿಗ ಸಮುದಾಯ ಮತ್ತು ಸ್ಥಳೀಯ ಗ್ರಾಹಕರಿಂದಲೂ ಬಲವಾಗಿ ಪ್ರತಿಧ್ವನಿಸುತ್ತದೆ ಎಂದು ನಾವು ನಂಬುತ್ತೇವೆ. ಈ ಪಾಲುದಾರಿಕೆಯು ಅಗ್ಥಿಯಾದ ವೈವಿಧ್ಯಮಯ ಪಾನೀಯ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಪ್ರದೇಶದ ಕ್ರಿಯಾತ್ಮಕ ಮಾರುಕಟ್ಟೆಯಲ್ಲಿ ನಮ್ಮ ನಾಯಕತ್ವವನ್ನು ಗಟ್ಟಿಗೊಳಿಸುತ್ತದೆ. ನಮ್ಮ ದೃಢವಾದ ವಿತರಣಾ ಜಾಲ ಮತ್ತು ಮಾರುಕಟ್ಟೆ ಪರಿಣತಿಯೊಂದಿಗೆ, ಯುಎಇಯ ಹೊಸ ಪೀಳಿಗೆಯ ಗ್ರಾಹಕರಿಗೆ ಕ್ಯಾಂಪಾ ಕೋಲಾವನ್ನು ಮತ್ತೆ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ,” ಎಂದಿದ್ದಾರೆ.

ಕ್ಯಾಂಪಾ ಪೋರ್ಟ್‌ಫೋಲಿಯೊ ಆರಂಭದಲ್ಲಿ ಕ್ಯಾಂಪಾ ಕೋಲಾ, ಕ್ಯಾಂಪಾ ಲೆಮನ್, ಕ್ಯಾಂಪಾ ಆರೆಂಜ್ ಮತ್ತು ಕೋಲಾ ಝೀರೋಗಳನ್ನು ಒಳಗೊಂಡಿರುತ್ತದೆ. ಅದರ ಆಕರ್ಷಕವಾದ ಕೆಂಪು ಮತ್ತು ನೇರಳೆ ಪ್ಯಾಕೇಜಿಂಗ್‌ನಿಂದ ಸ್ಪರ್ಧಾತ್ಮಕ ಬೆಲೆಯ ಉತ್ಪನ್ನದ ಭರವಸೆ ತನಕ ಕ್ಯಾಂಪಾ ಆಧುನಿಕ ಯಶಸ್ಸಿನ ಕಥೆ ಆಗುವ ಹಾದಿಯಲ್ಲಿದ್ದು, ಇದು ಯುಎಇಗೂ ಹೆಚ್ಚು ಪ್ರಸ್ತುತವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ