ರಾಜ್ಯ ಪ್ರವೇಶಿಸುವ ತಮಿಳುನಾಡು ನೋಂದಣಿ ವಾಹನಗಳಿಗೆ ನಿರ್ಬಂಧ - Mahanayaka
12:06 AM Saturday 25 - October 2025

ರಾಜ್ಯ ಪ್ರವೇಶಿಸುವ ತಮಿಳುನಾಡು ನೋಂದಣಿ ವಾಹನಗಳಿಗೆ ನಿರ್ಬಂಧ

thamillunadu
26/09/2023

ಚಾಮರಾಜನಗರ: ಕಾವೇರಿ ಕಿಚ್ಚು ‌ದಿನದಿನಕ್ಕೆ ತಾರಕಕ್ಕೇರುತ್ತಿದ್ದು, ಇಂದು ಬೆಂಗಳೂರು ಬಂದ್ ಗೆ ವಿವಿಧ ಸಂಘಟನೆಗಳು ಕರೆಕೊಟ್ಟ ಹಿನ್ನಲೆ ತಮಿಳುನಾಡು‌ ಸರ್ಕಾರ ತಮಿಳುನಾಡು ನೋಂದಣಿಯ ವಾಹನಗಳು ಕರ್ನಾಟಕಕ್ಕೆ ತೆರಳದಂತೆ ಗಡಿಯಲ್ಲಿ ನಿರ್ಬಂಧ ಹೇರಿದೆ.

ಬೆಂಗಳೂರು ಬಂದ್ ಹಿನ್ನಲೆ ಮುನ್ನೆಚ್ವರಿಕೆ ಕ್ರಮವಾಗಿ ಗುಂಡ್ಲುಪೇಟೆ ತಾಲೂಕಿನ ಕರ್ನಾಟಕ-ತಮಿಳುನಾಡು ಗಡಿ ಕೆಕ್ಕನಹಳ್ಳ ಚೆಕ್ ಪೋಸ್ಟ್ ಮೂಲಕ ಸಂಚಾರ ಮಾಡುವ ಎಲ್ಲಾ ರೀತಿಯ ತಮಿಳುನಾಡು ವಾಹನ ಸಂಚಾರಕ್ಕೆ ಅಲ್ಲಿನ ಜಿಲ್ಲಾಡಳಿತ ನಿರ್ಬಂಧ ಹಾಕಿದ್ದು, ಗಡಿಗೆ ಬರುವ ತಮಿಳುನಾಡು ನೋಂದಣಿ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ.

ಬೆಳಗ್ಗೆ 6 ಗಂಟೆಯಿಂದ 8:30ರವರೆಗೆ ಕರ್ನಾಟಕ-ತಮಿಳುನಾಡಿ ಗಡಿಯನ್ನು‌ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಮಾಹಿತಿ ಅರಿವಿಲ್ಲದೆ ಹಲವು ವಾಹನ ಸವಾರರು ಗುಂಡ್ಲುಪೇಟೆ ಮೂಲಕ ಕರ್ನಾಟಕದ ಗಡಿ ಕೆಕ್ಕನಹಳ್ಳಿ ಚೆಕ್ ಪೋಸ್ಟ್ ಗೆ ತೆರಳಿ ವಾಪಸ್ಸಾದರು. ಇನ್ನು ತಮಿಳುನಾಡಿಗೆ ತೆರಳುವ ತರಕಾರಿ ತುಂಬಿದ ಸರಕು‌ ಸಾಗಣೆ ಲಾರಿಗಳು ಚೆಕ್ ಪೋಸ್ಟ್ ಆಸುಪಾಸು ಕಿ.ಮೀ ದೂರದವರೆಗೆ ನಿಂತಿದ್ದವು.

ಬೆಳಗ್ಗೆ 8:30ರ ನಂತರ ಕರ್ನಾಟಕದಿಂದ ಸಂಚಾರ ಮಾಡುವ ಎಲ್ಲಾ ವಾಹನಗಳ ಸಂಚಾರಕ್ಕೆ ತಮಿಳುನಾಡು ಸರ್ಕಾರ ಅನುವು ಮಾಡಿದ ಹಿನ್ನಲೆ ವಾಹನ ಸಂಚಾರ ಯಥಾಸ್ಥಿತಿಗೆ ಮರಳಿತು.

ಇತ್ತೀಚಿನ ಸುದ್ದಿ