ರಾಜ್ಯದಲ್ಲಿ ಮತ್ತೆ ಸಾವಿರಕ್ಕೂ ಹೆಚ್ಚು ಮದ್ಯದಂಗಡಿಗಳ ಆರಂಭ!? - Mahanayaka

ರಾಜ್ಯದಲ್ಲಿ ಮತ್ತೆ ಸಾವಿರಕ್ಕೂ ಹೆಚ್ಚು ಮದ್ಯದಂಗಡಿಗಳ ಆರಂಭ!?

liquor
25/09/2023

ಬೆಂಗಳೂರು:  ರಾಜ್ಯದಲ್ಲಿ  ಸಾವಿರಕ್ಕೂ ಹೆಚ್ಚು ಮದ್ಯದಂಗಡಿಗಳ ಆರಂಭಕ್ಕೆ ಅಬಕಾರಿ ಇಲಾಖೆ ಮುಂದಾಗಿದೆ.

ಸಣ್ಣ ಗ್ರಾಮ ಪಂಚಾಯತ್ ಗಳು, ನಗರದಲ್ಲಿನ ಸೂಪರ್ ಮಾರುಕಟ್ಟೆಗಳಲ್ಲಿ ಹೊಸ ಪರವಾನಗಿ ವಿತರಣೆ ಹಾಗೂ ಬಳಕೆಯಲ್ಲಿ ಇಲ್ಲದ ಪರವಾನಗಿಗಳಿಗೆ ಮರುಜೀವ ನೀಡಲು ಇಲಾಖೆ ಮುಂದಾಗಿದೆ.

ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ನಿಗದಿ ಪಡಿಸಿರುವ ಗುರಿಯನ್ನು ಮೀರಿ ವರಮಾನ ಸಂಗ್ರಹಕ್ಕೆ ಯೋಜನೆ ರೂಪಿಸಿರುವ ಅಬಕಾರಿ ಇಲಾಖೆ, ಮದ್ಯದಂಗಡಿಗಳೇ ಇಲ್ಲದ 600 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ತಲಾ ಒಂದು ಮದ್ಯದಂಗಡಿಗೆ ಪರಮಾನಗಿ ಪ್ರಸ್ತಾವ ಸಿದ್ಧಪಡಿಸಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ