ಕ್ರಾಂತಿಕಾರಿ ಹೋರಾಟಗಾರ ಮಂಟೇಲಿಂಗಯ್ಯ ಹಠಾತ್ ಹೃದಯಾಘಾತದಿಂದ ನಿಧನ - Mahanayaka

ಕ್ರಾಂತಿಕಾರಿ ಹೋರಾಟಗಾರ ಮಂಟೇಲಿಂಗಯ್ಯ ಹಠಾತ್ ಹೃದಯಾಘಾತದಿಂದ ನಿಧನ

mantelingaiah
22/08/2023


Provided by

ಮೈಸೂರು: ಸಾಮಾಜಿಕ ಹೋರಾಟಗಾರ, ಅಂಬೇಡ್ಕರ್ ವಾದಿ, ಕ್ರಾಂತಿಕಾರಿ ಮಂಟೇಲಿಂಗಯ್ಯನವರು ಮೈಸೂರಿನ ಸ್ವಗೃಹದಲ್ಲಿ ಸೋಮವಾರ ಸಂಜೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ.

ಹಠಾತ್ ಹೃದಯಾಘಾತದಿಂದ ಮಂಟೇಲಿಂಗಯ್ಯನವರು ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಹಿನ್ನೆಲೆಯಲ್ಲಿ  ಕೆಸರೆಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಮಂಟೇಲಿಂಗಯ್ಯನವರು ಜನಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಸಾಮಾಜಿಕ ನ್ಯಾಯದ ಪ್ರತಿಪಾದಕರು ಕೂಡ ಆಗಿದ್ದರು. ಆಳುವ ಸರ್ಕಾರದ ಅಸಮಾನತೆಯ ನೀತಿಯನ್ನು ಸದಾ ಖಂಡಿಸುತ್ತಿದ್ದರು. ಎಜೆಎಂಎಸ್ ಎಂಬ ಸಂಘಟನೆಯನ್ನ ಹುಟ್ಟು ಹಾಕಿ ಚಳುವಳಿಯಲ್ಲಿ ಸಕ್ರಿಯರಾಗಿದ್ದರು.

ಮಂಟೇಲಿಂಗಯ್ಯನವರ ಹಠಾತ್ ನಿಧನದಿಂದಾಗಿ ಅವರ ಅಭಿಮಾನಿಗಳು ಹಾಗೂ ಸಾಮಾಜಿಕ ಹೋರಾಟದ ಒಡನಾಡಿಗಳು ಆಘಾತಕ್ಕೊಳಗಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ