ವಿವಾಹ ಕಾರ್ಯಕ್ರಮದಲ್ಲಿ ಅರ್ಚಕರನ್ನು ಹೀಗೆ ನಡೆಸಿಕೊಳ್ಳುವುದು ಸರಿಯೇ? - Mahanayaka

ವಿವಾಹ ಕಾರ್ಯಕ್ರಮದಲ್ಲಿ ಅರ್ಚಕರನ್ನು ಹೀಗೆ ನಡೆಸಿಕೊಳ್ಳುವುದು ಸರಿಯೇ?

surayanarayanna
25/04/2024


Provided by

ಮಧ್ಯಪ್ರದೇಶ: ವಿವಾಹ ಕಾರ್ಯಕ್ರಮ ನಡೆಸಲು ತೆರಳಿದ್ದ ಅರ್ಚಕರೊಬ್ಬರೊಬ್ಬರನ್ನು ಯುವಕರು ಹುಡುಗಾಡಿಕೆ ತೋರಿ ಅವಮಾನಿಸಿರುವ ಘಟನೆ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಉ.ಕೊತ್ತಪಲ್ಲಿ ಮಂಡಲದ ಮುಳಪೇಟ ಗ್ರಾಮದಲ್ಲಿ ನಡೆದಿದೆ.

ಪುರೋಹಿತರು ಮದುವೆ ಶಾಸ್ತ್ರ ನಡೆಸುತ್ತಿದ್ದಾಗ ಕೆಲ ಯುವಕರು ಖಾಲಿ ಕ್ಯಾರಿ ಬ್ಯಾಗ್ ಗಳನ್ನು ಅರ್ಚಕರ ಮುಖಕ್ಕೆ ಹಾಕಿದರು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದೇ ಕಾರ್ಯಕ್ರಮ ಮುಂದುವರಿಸಲು ಮುಂದಾದಾಗ ಇನ್ನೂ ಕೆಲವು ಯುವಕರು ಅವರ ಮೇಲೆ ಅರಿಶಿನ ಮತ್ತು ಕುಂಕುಮದ ಪುಡಿಯನ್ನು ಎಸೆದಿದ್ದು, ಈ ವೇಳೆ ಅರ್ಚಕ ಗರಂ ಆಗಿದ್ದಾರೆ.

ಈ ಘಟನೆ 10 ದಿನಗಳ ಹಿಂದೆ ನಡೆದಿದೆ ಎನ್ನಲಾಗಿದೆ. ಘಟನೆಯ ನಂತರ ಅರ್ಚಕರು ಮೌನ ವಹಿಸಿದ್ದರು. ಆದರೆ ಹಲ್ಲೆಯ ವಿಡಿಯೋವನ್ನು ಮದುಮಗನ ಕೆಲವು ಸಂಬಂಧಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು ವೈರಲ್ ಆಗಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಪುರೋಹಿತ ಸೂರ್ಯನಾರಾಯಣಮೂರ್ತಿ ಶರ್ಮಾ ಅವರನ್ನು ಸಂಪರ್ಕಿಸಿದಾಗ ಮದುವೆಗೆ ಬಂದಿದ್ದ ಕೆಲ ಪುಂಡರ ತಮ್ಮ ಮೇಲೆ ಕೀಟಲೆ ಮಾಡಿದ್ದು ನಿಜ, ಆ ರೀತಿಯಾಗಿ ನಡೆಸಿಕೊಂಡಿರುವುದು ನೋವು ತಂದಿದೆ ಎಂದು ಹೇಳಿದ್ದಾರೆ.

ಈ ಘಟನೆಯನ್ನು ಬ್ರಾಹ್ಮಣ ಸಮುದಾಯದ ಅರ್ಚಕರು ಹಾಗೂ ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ. ಹಲವರು ಸಂತ್ರಸ್ತ ಅರ್ಚಕರ ಮನೆಗೆ ತೆರಳಿ ಅವರನ್ನು ಭೇಟಿ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಒತ್ತಾಯಿಸಿದ್ದಾರೆ.

ಬ್ರಾಹ್ಮಣ ಮತ್ತು ವಿಶ್ವ ಹಿಂದೂ ಪರಿಷತ್ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಹಲವರು ಸಂತ್ರಸ್ತ ಅರ್ಚಕರ ಮನೆಗೆ ತೆರಳಿ ಅವರನ್ನು ಭೇಟಿ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಒತ್ತಾಯಿಸಿದ್ದಾರೆ.

ಮದುವೆ ಮನೆಯಲ್ಲಿ ಯುವಕರು ವಿನೋದಕ್ಕಾಗಿ ಆಟವಾಡಿದ್ದು, ಇದೀಗ ಅರ್ಚಕರ ಕೆಂಗಣ್ಣಿಗೆ ಗುರಿಯಾಗಿದೆ. ಯಾರನ್ನೇ ಆಗಲಿ ಮನೆಗೆ ಕರೆದರೆ ಅವರನ್ನು ಗೌರವವಾಗಿ ನಡೆಸಿಕೊಳ್ಳಬೇಕು. ಅವರ ಆಚರಣೆಗಳಲ್ಲಿ ನಂಬಿಕೆ ಇಲ್ಲವಾದರೆ, ಅವರನ್ನು ಕರೆಯಲೇ ಬಾರದು, ಮನೆಗೆ ಕರೆದು ಅವಮಾನಿಸುವುದು ಸರಿಯಲ್ಲ. ಪ್ರತಿಯೊಬ್ಬರಿಗೂ ಅವಮಾನವಾದಾಗ ಬೇರೆಯವರ ನೋವುಗಳು, ಭಾವನೆಗಳು ತಿಳಿಯೋದು ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿhttps://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ