ಅನುದಾನ ಬಿಡುಗಡೆಯಾಗದ ಹಿನ್ನೆಲೆ: ಗ್ರಾಮೀಣ ದಸರಾ ರದ್ದು! - Mahanayaka

ಅನುದಾನ ಬಿಡುಗಡೆಯಾಗದ ಹಿನ್ನೆಲೆ: ಗ್ರಾಮೀಣ ದಸರಾ ರದ್ದು!

dasara
20/10/2023

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಅ.20 ರಂದು ನಡೆಯಬೇಕಿದ್ದ ಗ್ರಾಮೀಣ ದಸರಾ ಅನುದಾನ ಬಿಡುಗಡೆಯಾಗದ ಹಿನ್ನೆಲೆ ರದ್ದುಗೊಂಡು ಕೇವಲ ಪಟ್ಟಣ ವ್ಯಾಪ್ತಿಯಲ್ಲಿ ದೀಪಾಲಂಕಾರಕ್ಕೆ ಸೀಮಿತವಾಗಿದೆ.

ಇಂದು ಸಂಜೆ 4 ರಿಂದ 10 ರವರೆಗೆ ಪಟ್ಟಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು 10 ಲಕ್ಷ ರೂ. ಅಂದಾಜಿನ ರೂಪುರೇಷೆ ಸಿದ್ಧಪಡಿಸಲಾಗಿತ್ತು‌. ಆದರೆ, ಗ್ರಾಮೀಣ ದಸರಾಗೆ ಅನುದಾನ ಕೊಡದ ಹಿನ್ನೆಲೆ ಗ್ರಾಮೀಣ ದಸರಾವೇ ರದ್ದಾಗಿದೆ.

ದೀಪಾಲಂಕಾರಕ್ಕೆ 50 ಸಾವಿರ ರೂ. ಬಿಡುಗಡೆಯಾದ ಹಿನ್ನೆಲೆ ಅ.17 ರಿಂದ 20 ರ ವರೆಗೆ ಪಟ್ಟಣದ ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿದೆ.

ಇತ್ತೀಚಿನ ಸುದ್ದಿ