ಜೋ ಬಿಡೆನ್-ಕಮಲ ಹ್ಯಾರಿಸ್ ದೀಪಾವಳಿ ಶುಭಾಶಯ ಹೇಳಿದ್ದು ಹೀಗೆ - Mahanayaka

ಜೋ ಬಿಡೆನ್-ಕಮಲ ಹ್ಯಾರಿಸ್ ದೀಪಾವಳಿ ಶುಭಾಶಯ ಹೇಳಿದ್ದು ಹೀಗೆ

15/11/2020

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಹಾಗೂ ಭಾರತೀಯ ಮೂಲದ ಉಪಾಧ್ಯಕ್ಷೆ ಕಮಲ ಹ್ಯಾರಿಸ್ ನಿನ್ನೆ ರಾತ್ರಿ ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದು, ಭಾರತೀಯರಿಗೆ ಶುಭ ಹಾರೈಸಿದ್ದಾರೆ.

 

ದೀಪಗಳ ಉತ್ಸವವನ್ನು ಆಚರಿಸುತ್ತಿರುವ ಹಿಂದೂ, ಜೈನ, ಸಿಖ್, ಬೌದ್ಧರಿಗೆ ನಾನು #ಹ್ಯಾಪಿದಿವಾಲಿಗಾಗಿ ಶುಭಾಶಯಗಳನ್ನು ಹೇಳುತ್ತಿದ್ದೇನೆ.  ನಿಮ್ಮ ಹೊಸ ವರ್ಷವು ಭರವಸೆ, ಸಂತೋಷ  ಮತ್ತು ಸಂವೃದ್ಧಿಯಿಂದ ತುಂಬಿರಲಿ.  ಸಾಲ್ ಮುಬಾರಕ್ ಎಂದು ಜೋ ಬಿಡೆನ್ ಟ್ವೀಟ್ ಮಾಡಿದ್ದಾರೆ.


Provided by

ಇನ್ನೂ ಉಪಾಧ್ಯಕ್ಷ ಕಮಲ ಹ್ಯಾರಿಸ್ ಕೂಡ ದೀಪಾವಳಿ ಶುಭಾಶಯ ಹೇಳಿದ್ದು, ಪ್ರಪಂಚದಾದ್ಯಂತ ದೀಪಾವಳಿ ಆಚರಿಸುತ್ತಿರುವವರಿಗೆ ಈ ವರ್ಷವು ಸುರಕ್ಷಿತ, ಆರೋಗ್ಯಕರ ಮತ್ತು ಸಂತೋಷದಾಯಕವಾಗಿರಲಿ ಎಂದು ಹಾರೈಸುತ್ತೇನೆ. ಸಾಲ್ ಮುಬಾರಕ್ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ