ಪಟಾಕಿ ಸಿಡಿಸಿ ದೆಹಲಿಯನ್ನು ಹೊಲಸೆಬ್ಬಿಸಿದ ಮೂಢರು - Mahanayaka

ಪಟಾಕಿ ಸಿಡಿಸಿ ದೆಹಲಿಯನ್ನು ಹೊಲಸೆಬ್ಬಿಸಿದ ಮೂಢರು

15/11/2020

ನವದೆಹಲಿ: ದೆಹಲಿಯಲ್ಲಿ ಪಟಾಕಿ ನಿಷೇಧಕ್ಕೆ ಆದೇಶಿಸಿದ್ದರೂ ಮೂಢರು ವ್ಯಾಪಕವಾಗಿ ಪಟಾಕಿ ಹಚ್ಚಿದ್ದು, ಇದರ ಪರಿಣಾಮ ದೆಹಲಿಯಾದ್ಯಂತಹ ದಟ್ಟ ಹೊಗೆ ವ್ಯಾಪಿಸಿದ್ದು, ವಾಯು ಮಾಲಿನ್ಯದ ಪ್ರಮಾಣ ಗಗನಕ್ಕೇರಿದೆ.

ದೆಹಲಿಯಲ್ಲಿ ನಿನ್ನೆ ರಾತ್ರಿಯಿಂದ ಪಟಾಕಿ ಹಚ್ಚಲು ಮೂಢರು ಆರಂಭಿಸಿದ್ದಾರೆ. ಬೆಳಗ್ಗೆ 8 ಗಂಟೆಯ ವೇಳೆಗೆ ಸರಾಸರಿ Air Quality Index 468ರಷ್ಟಿದ್ದರೆ, ರಾತ್ರಿ 2:5ಕ್ಕೆ 400ರಷ್ಟಕ್ಕೆ ವಾಯವಿನ ಗುಣಮಟ್ಟ ಕುಸಿದಿದೆ.  ಕೊರೊನಾ ಸಂದರ್ಭದಲ್ಲಿ ಗಾಳಿಯು ಇಷ್ಟೊಂದು ಕುಸಿತವಾಗಿರುವುದು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಲು ಕಾರಣವಾಗಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ವಾಯು ಮಾಲಿನ್ಯವು ಮನುಷ್ಯನ ರಕ್ತದೊತ್ತಡ, ಅಸ್ತಮಾ ಮೊದಲಾದ ಗಂಭೀರ ಸಮಸ್ಯೆಗಳಿರುವವರು ಪಟಾಕಿ ಹಾವಳಿಯಿಂದ ಬದುಕಿ ಉಳಿಯುವುದೇ ಕಷ್ಟಕರವಾಗಿದೆ. ದೇಶವನ್ನು ಕೊರೊನಾ ನಿಯಂತ್ರಣಕ್ಕೆ ತಿಂಗಳುಗಟ್ಟಲೆ ಬಂದ್ ಮಾಡಲಾಗಿತ್ತು. ಆದರೆ, ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳದೇ ಸರ್ಕಾವು ಹಿಂಬಾಗಿಲಿನ ಮೂಲಕ ಪಟಾಕಿ ಸಿಡಿಸಲು ಅನುಮತಿ ನೀಡಿ, ದೇಶದ ಜನರ ಆರೋಗ್ಯದ ಜೊತೆಗೆ ಆಟವಾಡುತ್ತಿದೆ.


Provided by

ಇತ್ತೀಚಿನ ಸುದ್ದಿ