ವಿದೇಶದಲ್ಲಿ ಸಚಿವರ ಮೋಜು ಮಸ್ತಿ: ಕಲ್ಯಾಣ ಭಾಗಕ್ಕೆ ನೀಡಿದ ಹಣ ದುರ್ಬಳಕೆ ಎಂದ ಪ್ರಿಯಾಂಕ್ ಖರ್ಗೆ - Mahanayaka

ವಿದೇಶದಲ್ಲಿ ಸಚಿವರ ಮೋಜು ಮಸ್ತಿ: ಕಲ್ಯಾಣ ಭಾಗಕ್ಕೆ ನೀಡಿದ ಹಣ ದುರ್ಬಳಕೆ ಎಂದ ಪ್ರಿಯಾಂಕ್ ಖರ್ಗೆ

priyank kharge
22/12/2022


Provided by

ಬೆಂಗಳೂರು: ರಾಜ್ಯ ಬಿಜೆಪಿ ಸಚಿವರು ಸರ್ಕಾರದ ಹಣದಲ್ಲಿ ವಿದೇಶ ಪ್ರವಾಸ ಹೋಗಲಿ ಆದರೆ ಹಿಂದುಳಿದ ಕಲ್ಯಾಣ ಭಾಗಕ್ಕೆ ನೀಡಿದ್ದ ಹಣದಲ್ಲಿ ಬೆಲ್ಜಿಯಂ, ನೆದರ್ಲ್ಯಾಂಡ್, ಫ್ರಾನ್ಸ್ ಮತ್ತು ಯುರೋಪ್ ದೇಶಗಳಿಗೆ ಹೋಗಿ ಮೋಜು ಮಸ್ತಿ ಮಾಡುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.


Provided by

ಸಚಿವರು, ಶಾಸಕರು ರಾಜ್ಯ ಸರಕಾರದ ಹಣದಲ್ಲಿ ಅಧ್ಯಯನ ಪ್ರವಾಸ ಕೈಗೊಳ್ಳುವುದು ವಾಡಿಕೆ. ಆದರೆ ಈ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನುದಾನವನ್ನೇ ಸಮರ್ಪಕವಾಗಿ ನೀಡುತ್ತಿಲ್ಲ, ಇಂತಹ ಸಂಧರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಿದ್ದ ಅಲ್ಪ ಹಣದಲ್ಲಿ ವಿದೇಶ ಪ್ರವಾಸ ಹೋಗುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ ಹಣ ನೀಡದೆ ಕಲ್ಯಾಣ ಭಾಗದ ಹಣವನ್ನು ಸಚಿವರ ವಿದೇಶ ಪ್ರವಾಸಕ್ಕೆ ಬಳಕೆ ಮಾಡುತ್ತಿರುವುದು ಯಾವ ನ್ಯಾಯ?, ಕಲ್ಯಾಣ ಕರ್ನಾಟಕದ ಹಣದಲ್ಲಿ ಸಚಿವರು ಮೋಜು ಮಸ್ತಿ ಮಾಡುವುದು ನ್ಯಾಯವೇ?,  ಪ್ರಾದೇಶಿಕ ಅಸಮತೋಲನೆಯಿಂದ ಬಳಲುತ್ತಿರುವ ಕಲ್ಯಾಣಕ್ಕೆ ಹೆಚ್ಚು ಹಣ ನೀಡಿ ಯೋಜನೆ ತಯಾರಿಸಿ ಸಮರ್ಪಕವಾಗಿ ಅನುಷ್ಠಾನಗೊಳ್ಳುವಂತೆ ನೋಡಬೇಕಿದ್ದ ಸರ್ಕಾರವೇ KKRDB ಹಣ ಪಡೆಯುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ! ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Provided by

ಅಭಿವೃದ್ಧಿಗೆ ನೀಡಿದ್ದ ಅನುದಾನವನ್ನು ಮಂತ್ರಿಗಳು, ಅಧ್ಯಕ್ಷರು, ಅಧಿಕಾರಿಗಳ ಪ್ರವಾಸಕ್ಕೆ ನೀಡಿರುವುದು ಅಕ್ಷಮ್ಯ, ಬೇಕಿದ್ದರೆ ರಾಜ್ಯ ಸರಕಾರದ ಹಣದಲ್ಲಿ ವಿದೇಶ ಪ್ರವಾಸ ಹೋಗಲಿ, ಆದರೆ ಹಿಂದುಳಿದ ಕಲ್ಯಾಣ ಭಾಗಕ್ಕೆ ನೀಡಿದ್ದ ಅಲ್ಪ ಹಣದಲ್ಲಿ ಸಚಿವರಿಗೆ ಮೋಜು ಮಸ್ತಿ ಮಾಡಲು ಮಂಡಳಿ ಹಣ ನೀಡಿದ್ದನ್ನು ಕಲ್ಯಾಣ ಕರ್ನಾಟಕದ ಜನರು ಕ್ಷಮಿಸುವುದಿಲ್ಲ! ಎಂದು ಅವರು ಎಚ್ಚರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ