ಹೊಸ ಮನೆಗೆ ಕೋಳಿಯನ್ನು ಬಲಿ ಕೊಡಲು ಹೋದ ವೃದ್ಧನ ದುರಂತ ಅಂತ್ಯ! - Mahanayaka
4:14 AM Thursday 23 - January 2025

ಹೊಸ ಮನೆಗೆ ಕೋಳಿಯನ್ನು ಬಲಿ ಕೊಡಲು ಹೋದ ವೃದ್ಧನ ದುರಂತ ಅಂತ್ಯ!

rooster
29/10/2022

ಚೆನ್ನೈ: ಹೊಸದಾಗಿ ಕಟ್ಟಿಸಿದ ಮನೆಗೆ ಹುಂಜವನ್ನು ಬಲಿಕೊಡಲು ಹೋದ 70 ವರ್ಷದ ವೃದ್ಧ ತಾನೇ ಬಲಿಯಾದ ದಾರುಣ ಘಟನೆ ಚೆನ್ನೈಯ ಪಲ್ಲವರಂ ಎಂಬಲ್ಲಿ ನಡೆದಿದೆ.

ರಾಜೇಂದ್ರನ್ ಎಂಬ ದಿನಗೂಲಿ ಕಾರ್ಮಿಕ ಮೃತಪಟ್ಟವರಾಗಿದ್ದಾರೆ. ಚೆನ್ನೈಯ ಪಲ್ಲವರಂ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಈ ದುರ್ಘಟನೆ ನಡೆದಿದೆ.

ಪಲ್ಲಾವರಂನ ಪೊಜಿಚಲೂರಿನ ಟಿ.ಲೋಕೇಶ್ ಎಂಬವರು 3 ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದ್ದರು. ಲಿಫ್ಟ್ ನಿರ್ಮಿಸಲೆಂದು ಮೀಸಲಿರಿಸಿದ್ದ ಜಾಗವನ್ನು ತೆರೆದಿಟ್ಟಿದ್ದರು.

ಶೇ.80ರಷ್ಟು ಕೆಲಸ ಮುಗಿದಿದ್ದ ಕಟ್ಟಡಕ್ಕೆ ಕೋಳಿಯನ್ನು ಬಲಿಕೊಡುವಂತೆ ಲೋಕೇಶ್ ಅವರು ದಿನಗೂಲಿ ಕಾರ್ಮಿಕರಾಗಿದ್ದ ರಾಜೇಂದ್ರನ್ ಅವರಿಗೆ ತಿಳಿಸಿದ್ದರು. ಕೋಳಿಯನ್ನು ಬಲಿಕೊಡಲೆಂದು ಹೋದ ರಾಜೇಂದ್ರನ್ ಅವರು, ಮೂರನೇ ಮಹಡಿಗೆ ತೆರಳಿದ್ದು, ಅಲ್ಲಿ ತೆರೆದ ಲಿಫ್ಟ್ ನಿಂದ  ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.

ಇತ್ತ ಬಲಿಕೊಡಲೆಂದು ಕೊಂಡೊಯ್ದಿದ್ದ ಹುಂಜ ಸಣ್ಣ ಗಾಯವೂ ಇಲ್ಲದೇ ಪಾರಾಗಿದೆ. ಬಲಿಕೊಡಲು ತೆರಳುತ್ತಿದ್ದ ವೇಳೆ ಆಯತಪ್ಪಿ ಖಾಲಿ ಲಿಫ್ಟ್ ನೊಳಗೆ ರಾಜೇಂದ್ರನ್ ಕಾಲಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ