ಹೊಸ ಮನುಷ್ಯಳಾಗಿ ಪರಿವರ್ತನೆಯಾಗಲು ಯಾತ್ರೆ: ಹಜ್ ನಿರ್ವಹಿಸಿದ ಸಾನಿಯಾ ಮಿರ್ಝಾ

ಹಜ್ ನಿರ್ವಹಿಸಿ ಹಿಂತಿರುಗಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಅವರ ಕುಟುಂಬದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ. ಸಾನಿಯಾ ಸಹೋದರಿ ಅನಂ ಮಿರ್ಜಾ ಮತ್ತು ಆಕೆಯ ಪತಿ ಅಸಾದುದ್ದೀನ್ ಅವರು ಈ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲಾಹನ ಅನುಗ್ರಹದಿಂದ ಹಜ್ ಪೂರ್ತಿ ಮಾಡಲು ಅವಕಾಶ ಲಭಿಸಿತು ಎಂದು ಅಸಾದುದ್ದೀನ್ instagram ನಲ್ಲಿ ಬರೆದಿದ್ದಾರೆ. ಸಾನಿಯಾ ಮತ್ತು ತಂದೆಯ ಜೊತೆ ತಾನಿರುವ ಫೋಟೋವನ್ನು ಅನಮ್ ಮಿರ್ಜಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಹಜ್ ನಿರ್ವಹಣೆಯ ಬಳಿಕ ಸನ ಮಿರ್ಜಾ ಹಂಚಿಕೊಂಡ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಹಂಚಿಕೆಯಾಗಿದೆ. ಸಾನಿಯಾ ಮಿರ್ಜಾ ತನ್ನ ಕುಟುಂಬ ಮತ್ತು ನಟಿ ಸನ ಖಾನ್ ಜೊತೆ ಹಜ್ ಯಾತ್ರೆಗೆ ಮಕ್ಕಾಕ್ಕೆ ಬಂದಿದ್ದರು.
ಪವಿತ್ರ ಹಜ್ ಯಾತ್ರೆಗಾಗಿ ನಾನು ಸಿದ್ಧಗೊಳ್ಳುತ್ತಿದ್ದೇನೆ ಎಂದು ಕೆಲವು ದಿನಗಳ ಹಿಂದೆ ಸಾನಿಯಾ ಮಿರ್ಜಾ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಹೊಸ ಮನುಷ್ಯಳಾಗಿ ಪರಿವರ್ತನೆಯಾಗಲು ಯಾತ್ರೆ ನಡೆಸುತ್ತಿದ್ದೇನೆ. ಯಾರಿಗಾದರೂ ನೋವು ಉಂಟು ಮಾಡಿದ್ದರೆ ತನ್ನನ್ನು ಕ್ಷಮಿಸಬೇಕು ಎಂದು ಕೂಡ ತಮ್ಮ ಪೋಸ್ಟ್ ನಲ್ಲಿ ಅವರು ವಿನಂತಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth