ಕರ್ತವ್ಯದ ವೇಳೆ ಸರಿಯಾದ ಆಹಾರ ಸಿಗದೆ 40 ನರ್ಸ್ ಗಳು ಕೊರೊನಾಕ್ಕೆ ಬಲಿ! - Mahanayaka

ಕರ್ತವ್ಯದ ವೇಳೆ ಸರಿಯಾದ ಆಹಾರ ಸಿಗದೆ 40 ನರ್ಸ್ ಗಳು ಕೊರೊನಾಕ್ಕೆ ಬಲಿ!

covid 19
13/05/2021


Provided by

ಪಾಟ್ನಾ: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ 40 ನರ್ಸ್ ಗಳು ಕೊರೊನಾಕ್ಕೆ ಬಲಿಯಾದ ಘಟನೆ ನಡೆದಿದ್ದು, ನರ್ಸ್ ಗಳು ಕರ್ತವ್ಯದಲ್ಲಿದ್ದಾಗ ಅವರಿಗೆ ಸರಿಯಾದ ವಸತಿ ಹಾಗೂ ಆಹಾರ ಒದಗಿಸದ ಹಿನ್ನೆಲೆಯಲ್ಲಿ ಅವರು ಕೊರೊನಾಕ್ಕೆ ಬಲಿಯಾಗಿದ್ದಾರೆ ಎನ್ನುವ ಸತ್ಯ ಬಯಲಾಗಿದೆ.

40 ನರ್ಸ್ ಗಳು ಸಾವನ್ನಪ್ಪಿರುವ ವಿಚಾರವನ್ನು ಬಿಹಾರ ವೈದ್ಯಕೀಯ ಮತ್ತು ಆರೋಗ್ಯ ನೌಕರರ ಸಂಘ ದೃಢಪಟಿಸಿದ್ದು, ಬಿಹಾರದ ವಿವಿಧ ಆಸ್ಪತ್ರೆಗಳ 40 ನರ್ಸ್ ಗಳು  ರಾತ್ರಿ ಪಾಳಿ ಸೇರಿದಂತೆ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದರು. ಆರೋಗ್ಯ ಇಲಾಖೆಯು ಇವರಿಗೆ ಸರಿಯಾದ ಆಹಾರ ಮತ್ತು ವಸತಿ ಒದಗಿಸಿಲ್ಲ. ಇದರಿಂದಾಗಿ ಅವರಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದು, ಅವರು ಕೊರೊನಾಕ್ಕೆ ಬಹಳ ಸುಲಭವಾಗಿ ಬಲಿಯಾಗಿದ್ದಾರೆ ಎಂದು ಸಂಘದ ಕಾರ್ಯದರ್ಶಿ ವಿಶ್ವನಾಥ್ ಸಿಂಗ್ ಹೇಳಿದ್ದಾರೆ.

ಬಿಹಾರದ ವಿವಿಧ ಆಸ್ಪತ್ರೆಗಳಲ್ಲಿ ಕೊರೊನಾ ಸಂದರ್ಭದಲ್ಲಿ  30 ಸಾವಿರ ನರ್ಸ್ ಗಳು ಮತ್ತು 15 ಸಾವಿರ ಎಎನ್ಎಂ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಿಂಗ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ