ಸರ್ಕಾರದ ದುರಾಂಹಕಾರಕ್ಕೆ ಸಾರಿಗೆ ನೌಕರ ಬಲಿ | ಸಾರಿಗೆ ನೌಕರನ ಆತ್ಮಹತ್ಯೆ  ಬಗ್ಗೆ ಸಚಿವ ಸವದಿ ನೀಡಿದ ಹೇಳಿಕೆ ಏನು ಗೊತ್ತಾ? - Mahanayaka
5:43 AM Wednesday 20 - August 2025

ಸರ್ಕಾರದ ದುರಾಂಹಕಾರಕ್ಕೆ ಸಾರಿಗೆ ನೌಕರ ಬಲಿ | ಸಾರಿಗೆ ನೌಕರನ ಆತ್ಮಹತ್ಯೆ  ಬಗ್ಗೆ ಸಚಿವ ಸವದಿ ನೀಡಿದ ಹೇಳಿಕೆ ಏನು ಗೊತ್ತಾ?

ksrtc
09/04/2021


Provided by

ಬೆಳಗಾವಿ: ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ಕರುಣೆ ಇಲ್ಲದ ನಡತೆಯ ನಡುವೆಯೇ  ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತವರು ಜಿಲ್ಲೆಯಲ್ಲಿಯೇ ಸಾರಿಗೆ ನೌಕರರೊಬ್ಬರು ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕ 40 ವರ್ಷ ವಯಸ್ಸಿನ ಶಿವಕುಮಾರ ನೀಲಗಾರ ಆತ್ಮಹತ್ಯೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮನೆಯಲ್ಲಿ ಶಿವಕುಮಾರ ನೇಣಿಗೆ ಶರಣಾಗಿದ್ದಾರೆ.

ಮುಷ್ಕರ ನಡೆಯುತ್ತಿದ್ದರೂ ಕೆಲಸಕ್ಕೆ ಹಾಜರಾಗುವಂತೆ ಅಧಿಕಾರಿಗಳು ಕಿರುಕುಳ ನೀಡಲಾಗಿದ್ದು, ಕೆಲಸದಿಂದ ತೆಗೆದು ಹಾಕುವ ಬೆದರಿಕೆಯನ್ನು ಅಧಿಕಾರಿಗಳು ಒಡ್ಡಿದ್ದರು ಎಂದು ಹೇಳಲಾಗಿದೆ ಇದರಿಂದ ಬೇಸತ್ತು, ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ನೌಕರನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ, ಅತಿಯಾದ ಸಾಲದಿಂದ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಹೊರತು ಯಾರ ಕಿರುಕುಳದಿಂದಲೂ ಅಲ್ಲ ಎಂದು ಹೇಳಿದ್ದಾರೆ.

ಅಧಿಕಾರಿಗಳ ಕಿರುಕುಳಕ್ಕೆ ಆತ್ಮಹತ್ಯೆ ಎಂದು ಸಾರಿಗೆ ಸಂಘಟನೆಗಳು ಇಲಾಖೆ ಮೇಲೆ ಕೆಟ್ಟ ಹೆಸರು ಬರುವಂತೆ ಆರೋಪಿಸುತ್ತಿದ್ದಾರೆ. ಆದರೆ ಸವದತ್ತಿಯಲ್ಲಿ ಸಾರಿಗೆ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಲದ ಕಾರಣದಿಂದಾಗಿ ಎಂದು ಹೇಳಿದರು

ಇನ್ನೂ ಸಾರಿಗೆ ನೌಕರರ ಪ್ರತಿಭಟನೆ ಸಂಬಂಧ ಇಂದು ಹೇಳಿಕೆ ನೀಡಿರುವ ಸಿಎಂ ಯಡಿಯೂರಪ್ಪ,  ಸಾರಿಗೆ ನೌಕರರ ಬೇಡಿಕೆಗಳಲ್ಲಿ, ಈಗಾಗಲೇ 8 ಬೇಡಿಕೆಗಳನ್ನು ಈಡೇರಿಸಲಾಗಿದೆ. ಆದ್ರೇ 6ನೇ ವೇತನ ಆಯೋಗದ ಶಿಫಾರಸ್ಸನ್ನು ಮಾಡಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಇತ್ತೀಚಿನ ಸುದ್ದಿ