ಹಿಂದೂಗಳು ಕಾಂಗ್ರೆಸ್ ಗೆ ವೋಟು ಹಾಕಬಾರದು: ಸಿ.ಟಿ.ರವಿ - Mahanayaka
12:00 AM Saturday 23 - August 2025

ಹಿಂದೂಗಳು ಕಾಂಗ್ರೆಸ್ ಗೆ ವೋಟು ಹಾಕಬಾರದು: ಸಿ.ಟಿ.ರವಿ

c t ravi
09/11/2022


Provided by

ಚಿಕ್ಕಮಗಳೂರು:  ಸತೀಶ್ ಜಾರಕಿಹೊಳಿ ಹಿಂದವಿ ಸಾಮ್ರಾಜ್ಯ ಸ್ಥಾಪನೆ ಮಾಡಿದ ಶಿವಾಜಿ ಮಹಾರಾಜ, ಮರಾಠ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ.ರವಿ ಹೇಳಿಕೆ ನೀಡಿದ್ದಾರೆ.

ಹಿಂದೂ ಅನ್ನೋ ಪದ ಭಾರತೀಯ ಮೂಲದಲ್ಲ, ಪರ್ಷಿಯನ್ ಮೂಲದ್ದು, ಅದು ಅಶ್ಲೀಲ ಅರ್ಥವನ್ನು ನೀಡುತ್ತದೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,  ಹಿಂದೂ ಅಂತ ಯಾರು ತಮ್ಮನ್ನ ಧರ್ಮದ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದೀರೋ ಅವ್ರು ಕಾಂಗ್ರೆಸ್ ಗೆ ವೋಟ್ ಹಾಕಬಾರದು. ಸತೀಶ್ ಜಾರಕಿಹೊಳಿ ಹಾಗೂ ಅವರ ಪಾರ್ಟಿಗೆ ಹಿಂದೂ ಸಾಮರ್ಥ್ಯ ಏನೂ ಅಂತ ತೋರಿಸಬೇಕು ಎಂದರು.

ಸತೀಶ್ ಜಾರಕಿಹೊಳಿ ಹಿಂದವಿ ಸಾಮ್ರಾಜ್ಯ ಸ್ಥಾಪನೆ ಮಾಡಿದ ಶಿವಾಜಿ ಮಹಾರಾಜ, ಮರಾಠ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ವಿಜಯನಗರದ ರಕ್ಷಣೆಯಲ್ಲಿ‌ ಮುಂಚೂಣಿಯಲ್ಲಿದ್ದ ನಾಯಕ ಸಮೂದಾಯಕ್ಕೂ ಅಪಮಾನ ಮಾಡಿದ್ದಾರೆ. ಅವ್ರು ಹುಟ್ಟಿದ ಸಮುದಾಯಕ್ಕೂ ಅಪಮಾನ ಮಾಡಿದ್ದಾರೆ ಎಂದರು.

ನೇತಾಜಿ ಸುಭಾಷ್ ಆಜಾದಿ ಹಿಂದೂ ಪೌಜ್  ಕಟ್ಟಿದ್ರು ನೇತಾಜಿ ಅವ್ರಿಗೆ ಅಪಮಾನ ಮಾಡಿದ್ದಾರೆ. ಸೈನ್ಯಕ್ಕೆ‌ ಹೋದ್ರೆ ಅವ್ರು ಘೋಷಣೆ ಕೂಗೋದೆ ಜೈಹಿಂದ್ ಅಂತ. ಸೈನಕ್ಕೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಧ್ಯಕ್ಷರಾಗಿ ತನ್ನ ತಪ್ಪಿಗೆ ಕ್ಷಮೆ ಕೇಳದೆ ದುರಾಂಕಾರದ ವರ್ತನೆ ತೋರಿದ್ದಾರೆ ಎಂದು ಅವರು ಆರೋಪಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ