ಸೌದಿಯಲ್ಲಿ ಜಗತ್ತಿನಲ್ಲಿಯೇ ಅತಿ ಉದ್ದದ ಮೆಟ್ರೋ ಲೋಕಾರ್ಪಣೆ: ವಿಶೇಷ ಏನ್ ಗೊತ್ತಾ?
28/11/2024
ಜಗತ್ತಿನಲ್ಲಿಯೇ ಅತಿ ಉದ್ದದ ಮೆಟ್ರೋ ಎಂದು ಗುರುತಿಸಿಕೊಂಡಿರುವ ರಿಯಾದ್ ಮೆಟ್ರೋವನ್ನು ಸೌದಿ ದೊರೆ ಸಲ್ಮಾನ್ ಉದ್ಘಾಟಿಸಿದ್ದಾರೆ. 176 ಕಿಲೋಮೀಟರ್ ಉದ್ದ ಮತ್ತು 6 ಲೈನ್ ಗಳನ್ನು ಈ ಮೆಟ್ರೋ ಹೊಂದಿದ್ದು, ಆರಂಭದ ಮೂರು ಹಳಿಗಳಲ್ಲಿ ಡಿಸೆಂಬರ್ 1ರಿಂದ ಸಂಚಾರ ಪ್ರಾರಂಭವಾಗಲಿದೆ.
ಡಿಸೆಂಬರ್ 15ರಂದು ಎರಡನೇ ಹಂತದ ಹಳಿಗಳನ್ನು ಮತ್ತು ಜನವರಿ ಐದಕ್ಕೆ ಸಂಪೂರ್ಣ ಹಳಿಗಳನ್ನು ಸಂಚಾರಕ್ಕೆ ತೆರೆಯಲಾಗುವುದು. 2 ಗಂಟೆಯ ಅವಧಿಯ ಪ್ರಯಾಣಕ್ಕೆ ಕೇವಲ ನಾಲ್ಕು ರಿಯಲ್ ಮಾತ್ರ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.
2013ರಲ್ಲಿ ದೊರೆ ಅಬ್ದುಲ್ಲಾರ ಆಡಳಿತದ ಸಮಯದಲ್ಲಿ ಈ ರಿಯಾದ್ ಮೆಟ್ರೋ ಯೋಜನೆಯನ್ನು ಘೋಷಿಸಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj