ರಸ್ತೆ ನಿಯಮ ಉಲ್ಲಂಘನೆ ವಿಚಾರ: ದಂಡದಲ್ಲಿ ರಿಯಾಯಿತಿ ನೀಡಲು ಸೌದಿಯಲ್ಲಿ ಚಿಂತನೆ

ರಸ್ತೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಹಾಕಲಾಗಿರುವ ದಂಡದ ಪ್ರಮಾಣದಲ್ಲಿ 25 ಶೇಕಡಾ ರಿಯಾಯಿತಿ ನೀಡುವ ಬಗ್ಗೆ ಸೌದಿ ಅರೇಬಿಯಾ ಟ್ರಾಫಿಕ್ ಇಲಾಖೆ ತಿಳಿಸಿದೆ. ಮುಂದಿನ 30 ದಿನಗಳ ಒಳಗೆ ದಂಡ ಕಟ್ಟುವವರಿಗೆ 25 ಶೇಕಡಾ ರಿಯಾಯಿತಿ ಸಿಗಲಿದೆ ಎಂದು ಟ್ರಾಫಿಕ್ ಇಲಾಖೆ ತಿಳಿಸಿದೆ. ಯಾರಿಗೆ ರಿಯಾಯಿತಿ ಬೇಡವೋ ಅವರು 60 ದಿನಗಳ ಒಳಗೆ ತಮ್ಮ ದಂಡದ ಮೊತ್ತವನ್ನು ಪಾವತಿಸಬೇಕು ಎಂದು ಕೂಡ ತಿಳಿಸಿದೆ.
ರಿಯಾಯಿತಿ ಲಭಿಸಿದರೂ ಲಭಿಸದಿದ್ದರೂ ದಂಡ ದಂಡದ ಮೊತ್ತವನ್ನು ನಿರ್ದಿಷ್ಟ ಸಮಯದೊಳಗೆ ಕಟ್ಟಬೇಕು ಎಂದು ತಿಳಿಸಲಾಗಿದೆ. ಇಲ್ಲದಿದ್ದರೆ ಈ ಅವಧಿಯನ್ನು 90 ದಿವಸಗಳ ವರೆಗೆ ವಿಸ್ತರಿಸಬೇಕು ಎಂಬ ವಿನಂತಿಯನ್ನು ಅಬು ಶೀರ್ ಫ್ಲ್ಯಾಟ್ ಫಾರ್ಮ್ ಮೂಲಕ ಕಳುಹಿಸಬೇಕು ಎಂದು ಟ್ರಾಫಿಕ್ ಇಲಾಖೆ ತಿಳಿಸಿದೆ. ಆದರೆ ಅವಧಿಯನ್ನು ವಿಸ್ತರಿಸಲು ಕೇಳಿಕೊಳ್ಳದೆ ಮತ್ತು ದಂಡದ ಮೊತ್ತವನ್ನೂ ಪಾವತಿಸಿದೆ ಇದ್ದರೆ ವಾಹನವನ್ನು ಜಪ್ತಿ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.
ನಿಶ್ಚಿತ ಅವಧಿಯೊಳಗೆ ದಂಡ ಪಾವತಿಸದಿದ್ದರೆ ದಂಡದ ಮೊತ್ತವನ್ನು ಅನುಸರಿಸಿ ವಾಹನವನ್ನು ಜಪ್ತಿ ಮಾಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಲಾಗಿದೆ. ಈ ತಿಂಗಳ ಏಪ್ರಿಲ್ 18ರಂದು ಟ್ರಾಫಿಕ್ ದಂಡ ಮೊತ್ತಕ್ಕೆ ಭಾರಿ ರಿಯಾಯಿತಿಯನ್ನು ಘೋಷಿಸಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth