ಪ್ರಧಾನಿ ಮೋದಿ ರಷ್ಯಾ ಭೇಟಿ: ಉಕ್ರೇನ್ ಅಧ್ಯಕ್ಷರಿಂದ ತೀವ್ರ ಆಕ್ಷೇಪ - Mahanayaka

ಪ್ರಧಾನಿ ಮೋದಿ ರಷ್ಯಾ ಭೇಟಿ: ಉಕ್ರೇನ್ ಅಧ್ಯಕ್ಷರಿಂದ ತೀವ್ರ ಆಕ್ಷೇಪ

09/07/2024

ಪ್ರಧಾನಿ ನರೇಂದ್ರ ಮೋದಿಯವರ ರಷ್ಯಾ ಭೇಟಿಗೆ ಉಕ್ರೇನ್ ಅಧ್ಯಕ್ಷ ವ್ಲಾದಿಮೀರ್ ಝೆಲೆನ್ ಸ್ಕಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಷ್ಯಾಕ್ಕೆ ಮೋದಿ ಭೇಟಿ ನೀಡಿರುವುದರಿಂದ ಶಾಂತಿ ಪ್ರಕ್ರಿಯೆಗೆ ತೀವ್ರ ಹೊಡೆತ ಬಿದ್ದಿದೆ ಮತ್ತು ಈ ಭೇಟಿ ತೀರ ನಿರಾಶ ಜನಕವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ರಷ್ಯಾದ ಮಿಸೈಲ್ ಅಕ್ರಮಣದಲ್ಲಿ ಇವತ್ತು 37 ಮಂದಿ ಉಕ್ರೇನಿಗರು ಸಾವಿಗೀಡಾಗಿದ್ದಾರೆ. ಇದರಲ್ಲಿ ಮೂವರು ಮಕ್ಕಳೂ ಇದ್ದಾರೆ. 170 ಮಂದಿಗೆ ಗಾಯಗಳಾಗಿವೆ. ಉಕ್ರೇನಿನ ಅತಿ ದೊಡ್ಡ ಮಕ್ಕಳ ಆಸ್ಪತ್ರೆಗೆ ಈ ಮಿಸೈಲ್ ದಾಳಿ ನಡೆದಿದೆ. ಕ್ಯಾನ್ಸರ್ ರೋಗಿಗಳನ್ನು ಗುರಿ ಮಾಡಿ ಈ ಮಿಸೈಲ್ ಗಳನ್ನು ಎಸೆಯಲಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ತುಂಬಾ ಮಂದಿ ಸಿಲುಕಿಕೊಂಡಿದ್ದಾರೆ. ಇಂಥದ್ದೊಂದು ದಿನದಲ್ಲಿ ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರ ರಾಷ್ಟ್ರದ ನಾಯಕ ಜಗತ್ತಿನ ಅತಿ ದೊಡ್ಡ ರಕ್ತದಾಹಿ ಯನ್ನು ಆಲಿಂಗನ ಮಾಡುವುದು ಅತಿಯಾದ ನಿರಾಶೆಯನ್ನು ತಂದೊಡ್ಡಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನದ ಸಂದರ್ಶನಕ್ಕೆ ರಷ್ಯಾಕ್ಕೆ ಭೇಟಿ ನೀಡಿದ್ದಾರೆ. 22ನೇ ಭಾರತ ರಷ್ಯಾ ಶೃಂಗಸಭೆಯ ಭಾಗವಾಗಿ ಈ ಭೇಟಿ ನಡೆದಿದೆ. ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ