ಸೌದಿಯಲ್ಲಿ ತೀವ್ರ ಚಳಿ: ಅಬ್ಬಬ್ಬಾ, ಉಷ್ಣತೆ ಮೈನಸ್ 4 ಡಿಗ್ರಿ ಸೆಲ್ಸಿಯಸ್ ದಾಖಲು
ಸೌದಿಯನ್ನು ತೀವ್ರ ಚಳಿ ಆವರಿಸಿಕೊಂಡಿದೆ. ಪಶ್ಚಿಮ ಗಡಿ ಪ್ರದೇಶವಾದ ತುರೈಫಾ ದಲ್ಲಿ ಉಷ್ಣತಾಮಾನ ಮೈನಸ್ ನಾಲ್ಕು ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ರಫಾ ಗವರ್ನರೇಟ್ ನ ಅಲ್ ಕುರೈಯ್ಯಾತ್ ನಲ್ಲಿ ಮೈನಸ್ ಮೂರು ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದಾಗಿ ವರದಿಯಾಗಿದೆ. ಹಾಯಿಲ್, ರಿಯಾದ್ ಮತ್ತು ಪೂರ್ವ ಭಾಗಗಳಲ್ಲೂ ಕಠಿಣ ಚಳಿ ಇರುವುದಾಗಿ ವರದಿಯಾಗಿದೆ.
ಹಲವು ಕಡೆಗಳಲ್ಲಿ ಮಳೆ ಮತ್ತು ಮಂಜು ಆವರಿಸಿಕೊಂಡಿದೆ. ಅರಾರಿಯದಲ್ಲಿ ಮೈನಸ್ ಎರಡು ಡಿಗ್ರಿ ಸೆಲ್ಸಿಯಸ್ ಚಳಿ ದಾಖಲಾಗಿದೆ. ಈ ಚಳಿ ಮುಂದಿನ ಕೆಲವು ದಿನಗಳ ಕಾಲ ಇರಲಿದೆ ಎಂದು ಸಂಬಂಧಿತ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ ಕೆಲವು ದಿನಗಳ ಕಾಲ ಈ ಚಳಿಯ ವಾತಾವರಣ ಮುಂದುವರಿಯಲಿದೆ ಎಂದು ಹೇಳಲಾಗಿದೆ. ನಜ್ ರಾನ್, ಅಸೀರ್, ಜೀಸಾನ್ ಮುಂತಾದ ಪ್ರದೇಶಗಳಲ್ಲಿ ಸಿಡಿಲಿನಿಂದ ಕೂಡಿದ ಮಳೆ ಬಂದಿರುವುದಾಗಿ ವರದಿಯಾಗಿದೆ.
ವಾತಾವರಣದ ಬದಲಾವಣೆಯಿಂದಾಗಿ ವಿವಿಧ ಪ್ರದೇಶಗಳಲ್ಲಿ ಆರೋಗ್ಯ ಸಮಸ್ಯೆ ಕೂಡ ಕಾಣಿಸಿಕೊಂಡಿದ್ದು ಜನರು ಸೂಕ್ತ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj