ಸೌದಿ ಅರೇಬಿಯಾದ ಕರೆನ್ಸಿ ಕೊಡ್ತೀನಿ ಎಂದು ನಂಬಿಸಿ ನಾಲ್ಕು ಲಕ್ಷ ಹಣ ಕಿತ್ತು ಎಸ್ಕೇಪ್! - Mahanayaka

ಸೌದಿ ಅರೇಬಿಯಾದ ಕರೆನ್ಸಿ ಕೊಡ್ತೀನಿ ಎಂದು ನಂಬಿಸಿ ನಾಲ್ಕು ಲಕ್ಷ ಹಣ ಕಿತ್ತು ಎಸ್ಕೇಪ್!

arabic carency
31/01/2023

ಈಗ ಮೋಡಿನ ಮಾತಿಗೆ ಎಲ್ಲೆ ಇಲ್ಲ. ಮೋಸದಾಟಕ್ಕೂ ಎಲ್ಲೆ ಇಲ್ಲ. ಹೌದು. ಯಾರೋ ವ್ಯಕ್ತಿಯೋರ್ವ ಬಂದು ನಿನಗೆ ಕಡಿಮೆ ಬೆಲೆಯಲ್ಲಿ ಸೌದಿ ಅರೇಬಿಯಾದ ಕರೆನ್ಸಿ ಕೊಡ್ತೀನಿ ಅಂತಾ ಹೇಳಿ ನಾಲ್ಕು ಲಕ್ಷ ಹಣ ಕಿತ್ತು ಎಸ್ಕೇಪ್ ಆಗಿರುವ ಸಿನಿಮೀಯ ಘಟನೆ ಮಂಗಳೂರಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಮಂಗಳೂರು ನಗರದ ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಜಂಕ್ಷನ್ ನಲ್ಲಿರುವ ತಾಜ್ ಬುಕ್ ಸ್ಟಾಲ್ ಗೆ ಹೋಗಿದ್ದ ಅಪರಿಚಿತ ವ್ಯಕ್ತಿಯೋರ್ವ ತನ್ನ ಬಳಿ ಸೌದಿ ಅರೇಬಿಯಾದ ಕರೆನ್ಸಿ ಇದೆ. ಅದನ್ನು ಕಡಿಮೆ ಬೆಲೆಗೆ ನಿಮಗೆ ಕೊಡುತ್ತೇನೆಂದು ವ್ಯಕ್ತಿಯೊಬ್ಬರಿಗೆ ಹೇಳಿದ್ದ. ರವಿವಾರ ಅಪರಿಚಿತ ವ್ಯಕ್ತಿಯು 4 ಲಕ್ಷ ರೂಪಾಯಿ ರೆಡಿ ಮಾಡಿ ಮಂಗಳೂರಿಗೆ ತಂದು ಕರೆ ಮಾಡುವಂತೆ ತಿಳಿಸಿದ್ದ.

ಈ ಮಾತನ್ನು ನಂಬಿದ ವ್ಯಕ್ತಿಯು ಸೋಮವಾರ ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬರಿಗೆ ಕರೆ ಮಾಡಿದ್ದರು. ಆವಾಗ ಆ ವ್ಯಕ್ತಿ ನೀವು ಮಂಗಳೂರು ನಗರದ ಸ್ಟೇಟ್ಬ್ಯಾಂಕ್ ಸಮೀಪದ ಸರ್ವೀಸ್ ಬಸ್ ನಿಲ್ದಾಣಕ್ಕೆ ಹೋಗುವ ಮೈದಾನದ ಬಳಿ ಇರುವ ಮೆಸ್ಕಾಂ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಕಾಯುವಂತೆ ತಿಳಿಸಿದ್ದ.

ಅದರಂತೆ ಅಲ್ಲಿಗೆ ಹೋಗಿ ಕಾಯುತ್ತಾ ನಿಂತುಕೊಂಡಿದ್ದಾಗ ಅಪರಿಚಿತ ವ್ಯಕ್ತಿಯು ಬಂದು ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಕಟ್ಟನ್ನು ನೀಡಿ ಮೋಸಕ್ಕೊಳಗಾದ ವ್ಯಕ್ತಿಯ ಬಳಿ ಇದ್ದ 4 ಲಕ್ಷ ರೂಪಾಯಿಯನ್ನು ಕಿತ್ತು ತಕ್ಷಣ ಓಡಿ ಪರಾರಿಯಾಗಿದ್ದಾನೆ. ಈ ಕುರಿತು ಮೋಸಕ್ಕೊಳಗಾದ ವ್ಯಕ್ತಿಯು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ