ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಅವರ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ
ಬೆಳಗಾವಿ: ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಸತೀಶ್ ಜಾರಕಿಹೊಳಿ ಅವರ ನೇತೃತ್ವದ ಮಾನವ ಬಂಧುತ್ವ ವೇದಿಕೆಯು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದ್ದು, ವಿಜೇತರಿಗೆ ಪ್ರಶಸ್ತಿ ಹಾಗೂ ಸತೀಶ್ ಜಾರಕಿಹೊಳಿ ಅವರ ಹೆಲಿಕಾಫ್ಟರ್ ನಲ್ಲಿ ವಿಹಾರಿಸುವ ಅವಕಾಶವನ್ನು ನೀಡಲಾಗುವುದು ಎಂದು ಮಾನವ ಬಂಧುತ್ವ ವೇದಿಕೆ ತಿಳಿಸಿದೆ.
ಪ್ರಬಂಧದ ವಿಷಯ, “ಸಾವಿತ್ರಿಬಾಯಿ ಫುಲೆ ಅವರ ಹೋರಾಟ ಮತ್ತು ಮಹಿಳಾ ಶಿಕ್ಷಣಕ್ಕೆ ಅವರ ಕೊಡುಗೆ”. ಅಭ್ಯರ್ಥಿಗಳು ಪ್ರಬಂಧವನ್ನು ಕಡ್ಡಾಯವಾಗಿ ಟೈಪ್ ಮಾಡಿ ಕಳುಹಿಸಬೇಕು . ಕನ್ನಡ, ಹಿಂದಿ, ಮರಾಠಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಬರೆಯಬಹುದು. ಪ್ರಬಂಧದಲ್ಲಿ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.
ಪ್ರಬಂಧ ಸಲ್ಲಿಸಲು ಜನವರಿ 1, 2021 ಕೊನೆಯ ದಿನಾಂಕವಾಗಿದೆ. ಪ್ರಬಂಧ ಕಳುಹಿಸಬೇಕಾದ ವಿಳಾಸ: ಮಾನವ ಬಂಧುತ್ವ ವೇದಿಕೆ-ಕರ್ನಾಟಕ, ಕೇಂದ್ರ ಕಚೇರಿ, 1ನೇ ಮಹಡಿ, ಶಿವಕೃಪಾ ಬಿಲ್ಡಿಂಗ್, ಕೊಲ್ಲಾಪುರ ಸರ್ಕಲ್ ಬಳಿ, ಸಾಯಿ ಸಂಗಮ್ ಹೊಟೇಲ್ ಹಿಂಭಾಗ, ನೆಹರೂ ನಗರ, ಬೆಳಗಾವಿ. 590010ಗೆ ಕಳುಹಿಸಬಹುದಾಗಿದೆ. ಇ-ಮೇಲ್ mbvkarnataka@gmail.com ಮೂಲಕವೂ ಪ್ರಬಂಧಗಳನ್ನು ಕಳುಹಿಸಬಹುದಾಗಿದ್ದು, ಕಳುಹಿಸಬಹುದು. ತೀರ್ಪುಗಾರರ ತೀರ್ಮಾನ ಅಂತಿಮವಾಗಿರುತ್ತದೆ.
ಇದನ್ನೂ ಓದಿ: ದುಷ್ಟ ಸಂಸ್ಕೃತಿಗಳ ಸೆರೆಯಲ್ಲಿ ಸಿಲುಕಿದವರಿಗೆ ಅಕ್ಷರದ ಆಸರೆ ನೀಡಿದ ಸಾವಿತ್ರಿಬಾಯಿ ಫುಲೆ


























