ರೋಹಿಂಗ್ಯ ನಿರಾಶ್ರಿತರ ಬಂಧನ: ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ದೇಶದ ಜೈಲುಗಳಲ್ಲಿ ಮತ್ತು ಬಂಧನ ಕೇಂದ್ರಗಳಲ್ಲಿ ಅನ್ಯಾಯವಾಗಿ ರೋಹಿಂಗ್ಯ ನಿರಾಶ್ರಿತರನ್ನು ಬಂಧಿಸಿಡಲಾಗಿದ್ದು ಅವರನ್ನು ಬಿಡುಗಡೆಗೊಳಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿಗೊಳಿಸಿದೆ.
ರಿಯಾಲಿ ಸರ್ ಎಂಬುವವರು ಸಲ್ಲಿಸಿದ ಅರ್ಜಿಯ ಮೇಲೆ ಜಸ್ಟಿಸ್ ಬಿ ಆರ್ ಗವಾಯಿ ಮತ್ತು ಪಿಕೆ ಮಿಶ್ರ ಅವರ ನ್ಯಾಯ ಪೀಠವು ಈ ನೋಟಿಸನ್ನು ಜಾರಿಗೊಳಿಸಿದೆ. ಜನಾಂಗೀಯ ಹತ್ಯೆಯ ಕಾರಣಕ್ಕಾಗಿ ಮ್ಯಾನ್ಮಾರ್ ನ ರೋಹಿಂಗ್ಯನ್ ನಿರಾಶ್ರಿತರು ತಮ್ಮ ದೇಶವನ್ನು ಬಿಡಬೇಕಾಗಿ ಬಂದಿದೆ.
ಇದನ್ನು ವಿಶ್ವ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯ ಕೂಡ ಒಪ್ಪಿಕೊಂಡಿದೆ. ಭಾರತದಲ್ಲಿ ಮುಸ್ಲಿಮರ ವಿರುದ್ಧ ಇರುವ ದ್ವೇಷ ಭಾವವು ಈ ನಿರಾಶ್ರಿತರ ಮೇಲು ತಿರುಗಿದ್ದು ಅವರನ್ನು ಬಂಧನದಲ್ಲಿಡುವ ಅಥವಾ ಮ್ಯಾನ್ಮಾರ್ ಗೆ ಮರಳಿ ಕಳುಹಿಸುವ ಭೀತಿ ಎದುರಾಗಿದೆ. ಇವರನ್ನು ನುಸುಳುಕೋರರು ಎಂದು ಹೇಳಿ ಪಕ್ಷಪಾತವಾಗಿ ನಡೆಸಿಕೊಳ್ಳಲಾಗುತ್ತಿದೆ ಮತ್ತು ಇದಕ್ಕೆ ನಿಯಂತ್ರಣ ಹೇರಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ರೋಹಿಂಗ್ಯ ನಿರಾಶ್ರಿತರನ್ನು ಬಂಧನದಲ್ಲಿಡುವುದು ಮಾನವ ಹಕ್ಕುಗಳ ಹರಣ ಎಂದು ಅರ್ಜಿಯಲ್ಲಿ ಹೇಳಲಾಗಿದೆ.