ಜಾತ್ಯತೀತತೆ ಅನ್ನೋದು ಯುರೋಪಿಯನ್ ಪರಿಕಲ್ಪನೆ: ಭಾರತಕ್ಕೆ ಇದರ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲರ ವಿವಾದಾತ್ಮಕ ಹೇಳಿಕೆ
ಜಾತ್ಯತೀತತೆಯ ಉಗಮ ಮತ್ತು ಅರ್ಥದ ಬಗ್ಗೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರು ಇದನ್ನು “ಬೇಜವಾಬ್ದಾರಿಯುತ” ಹೇಳಿಕೆ ಎಂದು ಕರೆದಿದ್ದಾರೆ.
ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರವಿ, ಜಾತ್ಯತೀತತೆಯು ಪಶ್ಚಿಮದ ದೂರದ ದೇಶಗಳಿಂದ ಬಂದ ಪರಿಕಲ್ಪನೆಯಾಗಿದೆ, ಅದಕ್ಕೆ ಭಾರತದಲ್ಲಿ ನೆಲೆಯಿಲ್ಲ ಎಂದು ಅವರು ಹೇಳಿದ್ದಾರೆ.
ಈ ದೇಶದ ಜನರ ಮೇಲೆ ಸಾಕಷ್ಟು ವಂಚನೆಗಳು ನಡೆದಿವೆ. ಇವುಗಳಲ್ಲಿ ಒಂದು ಅವರು ಜಾತ್ಯತೀತತೆಯ ತಪ್ಪು ವ್ಯಾಖ್ಯಾನವನ್ನು ನೀಡಲು ಪ್ರಯತ್ನಿಸಿದ್ದಾರೆ. ಜಾತ್ಯತೀತತೆ ಎಂದರೇನು..? ಜಾತ್ಯತೀತತೆ ಯುರೋಪಿಯನ್ ಪರಿಕಲ್ಪನೆಯಾಗಿದೆ ಮತ್ತು ಇದು ಭಾರತೀಯ ಪರಿಕಲ್ಪನೆಯಲ್ಲ” ಎಂದು ರವಿ ಹೇಳಿದ್ದಾರೆ.
ಯುರೋಪಿನಲ್ಲಿ ಚರ್ಚ್ ಮತ್ತು ರಾಜನ ನಡುವೆ ಜಗಳವಿದ್ದ ಕಾರಣ ಜಾತ್ಯತೀತತೆ ಬಂದಿತು. ಭಾರತವು ಧರ್ಮದಿಂದ ದೂರವಿರಲು ಹೇಗೆ ಸಾಧ್ಯ? ಜಾತ್ಯತೀತತೆಯು ಯುರೋಪಿಯನ್ ಪರಿಕಲ್ಪನೆಯಾಗಿದೆ ಮತ್ತು ಅದು ಅಲ್ಲಿ ಮಾತ್ರ ಇರಲಿ. ಭಾರತದಲ್ಲಿ, ಜಾತ್ಯತೀತತೆಯ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth




























