ಆಟೋರಿಕ್ಷಾ ಚಾಲಕನೊಂದಿಗೆ ವಾಗ್ವಾದ ನಡೆಸುತ್ತಿದ್ದ ವೇಳೆ ಶಿವಸೇನಾ ನಾಯಕನ ಪುತ್ರ ಹೃದಯಾಘಾತದಿಂದ ಸಾವು
ಪಾಲ್ಘರ್ ಜಿಲ್ಲೆಯ ವಾಸೈನಲ್ಲಿ ಆಟೋರಿಕ್ಷಾ ಚಾಲಕನೊಂದಿಗೆ ವಾಗ್ವಾದದ ಮಾಡುತ್ತಿದ್ದ ಸಮಯದಲ್ಲಿ ಥಾಣೆ ಶಿವಸೇನೆ (ಯುಬಿಟಿ) ನಾಯಕನ 45 ವರ್ಷದ ಮಗ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ನಂತರ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಕೊಲೆಗೆ ಸಮನಾಗದ ನರಹತ್ಯೆಯ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಅವಿಭಜಿತ ಶಿವಸೇನೆಯ ಮಾಜಿ ಥಾಣೆ ಜಿಲ್ಲಾ ಮುಖ್ಯಸ್ಥ ರಘುನಾಥ್ ಮೋರೆ ಅವರ ಪುತ್ರ ಮಿಲಿಂದ್ ಮೋರೆ ಅವರು ಭಾನುವಾರ ತಡರಾತ್ರಿ ಘಟನೆ ನಡೆದಾಗ ತಮ್ಮ ಕುಟುಂಬದೊಂದಿಗೆ ನವಾಪುರದ ರೆಸಾರ್ಟ್ ನಲ್ಲಿದ್ದರು ಎಂದು ಉಪ ಪೊಲೀಸ್ ಆಯುಕ್ತ ಜಯಂತ್ ಬಾಜ್ಬಾಲೆ ತಿಳಿಸಿದ್ದಾರೆ.
“ರೆಸಾರ್ಟ್‌ನಿಂದ ಹೊರಬರುತ್ತಿದ್ದಾಗ, ಅವರು ರಿಕ್ಷಾ ಚಾಲಕನೊಂದಿಗೆ ವಾಗ್ವಾದ ನಡೆಸಿದರು. ಆ ಸಮಯದಲ್ಲಿ ಅವರು ಕುಸಿದುಬಿದ್ದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು ಮತ್ತು ಹೃದಯಾಘಾತವು ಪ್ರಾಥಮಿಕ ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ “ಎಂದು ಅವರು ಹೇಳಿದರು.
ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 (ಉದ್ದೇಶಪೂರ್ವಕವಲ್ಲದ ನರಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಮಿಲಿಂದ್ ಮೋರೆ ಅವರು ಶಿವಸೇನೆ (ಯುಬಿಟಿ) ಪಕ್ಷದ ಥಾಣೆ ಘಟಕದ ಉಪ ಮುಖ್ಯಸ್ಥರಾಗಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth