ಉತ್ತರ ಭಾರತದಲ್ಲಿ ದಟ್ಟ ಮಂಜು: ಹಲವಾರು ರೈಲುಗಳು, ವಿಮಾನಗಳ ಪ್ರಯಾಣಕ್ಕೆ ಧಕ್ಕೆ; ಹಲವಾರು ಸೇವೆ ರದ್ದು - Mahanayaka
10:53 AM Wednesday 20 - August 2025

ಉತ್ತರ ಭಾರತದಲ್ಲಿ ದಟ್ಟ ಮಂಜು: ಹಲವಾರು ರೈಲುಗಳು, ವಿಮಾನಗಳ ಪ್ರಯಾಣಕ್ಕೆ ಧಕ್ಕೆ; ಹಲವಾರು ಸೇವೆ ರದ್ದು

29/12/2023


Provided by

ಜನವರಿ 2 ರವರೆಗೆ ಉತ್ತರ ಭಾರತದ ರಾಜ್ಯಗಳಲ್ಲಿ ದಟ್ಟವಾದ ಮಂಜು ಇರಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ಚಂಡೀಗಢದ ಕೆಲವು ಭಾಗಗಳಲ್ಲಿ ಶೀತ ದಿನದ ಪರಿಸ್ಥಿತಿಗಳು ಮುಂದುವರಿಯುತ್ತವೆ ಎಂದು ಐಎಂಡಿಯ ಬೆಳಿಗ್ಗೆ ಬುಲೆಟಿನ್ ತಿಳಿಸಿದೆ.

ಜನವರಿ 2 ಕ್ಕಿಂತ ಮೊದಲು ಮಂಜಿನ ವಾತಾವರಣ ಕಡಿಮೆಯಾಗಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.
ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ಇಂದು ಮಂಜು ಕವಿದಿರುವುದಕ್ಕೆ ರೆಡ್ ಅಲರ್ಟ್ ಮತ್ತು ನಾಳೆ ಆರೆಂಜ್ ಅಲರ್ಟ್ ನೀಡಲಾಗಿದೆ. ಡಿಸೆಂಬರ್ 31 ರಂದು ಪಂಜಾಬ್‌ಗೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಜನವರಿ 2 ರವರೆಗೆ ಉತ್ತರ ಭಾರತದ ರಾಜ್ಯಗಳಲ್ಲಿ ಮಂಜು ಕವಿದಿರುವುದಕ್ಕೆ ಐಎಂಡಿ ಹಳದಿ ಎಚ್ಚರಿಕೆ ನೀಡಿದೆ.

ಈ ದಟ್ಟ ಮಂಜಿನ ಪರಿಸ್ಥಿತಿಗಳು ಸಾರಿಗೆ ಸೇವೆಗಳ ಮೇಲೆ ಭಾರಿ ಪರಿಣಾಮ ಬೀರಿವೆ. ವಿಮಾನಗಳು ಮತ್ತು ರೈಲು ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ. ಉತ್ತರ ರೈಲ್ವೆಯ ಮಾಹಿತಿಗಳ ಪ್ರಕಾರ, ದೆಹಲಿ-ಹೌರಾ ಮಾರ್ಗದಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ಸೇರಿದಂತೆ ಡಜನ್ ಗಟ್ಟಲೆ ರೈಲುಗಳು 10 ರಿಂದ 12 ಗಂಟೆಗಳ ನಡುವೆ ತಡವಾಗಿ ಚಲಿಸುತ್ತಿವೆ.

ಇತ್ತೀಚಿನ ಸುದ್ದಿ