ನವರಾತ್ರಿಗೆ ಶಕ್ತಿ ಸಾಥ್: ಮಹಿಳೆಯರನ್ನು ನಿಭಾಯಿಸಲು ಡ್ರೈವರ್, ಕಂಡಕ್ಟರ್ ಹರಸಾಹಸ

22/10/2023
ಚಿಕ್ಕಮಗಳೂರು: ನವರಾತ್ರಿಗೆ ಶಕ್ತಿ ಯೋಜನೆ ಫುಲ್ ಸಾಥ್ ನೀಡಿದೆ. ಬಸ್ಸಿನ ಕಿಟಕಿಯಲ್ಲಿ ಮಕ್ಕಳನ್ನ ಟವೆಲ್ ನಂತೆ ತುಂಬಿದ ಪೋಷಕರು, ಬಸ್ ನ ಕಿಟಕಿಯಿಂದ ಮಕ್ಕಳನ್ನು ಹತ್ತಿಸಿ ಸೀಟ್ ರಿಸರ್ವೇಶನ್ ಮಾಡಿಕೊಳ್ಳುತ್ತಿರುವ ದೃಶ್ಯ ಕಂಡು ಬಂತು, ಒಂದೇ ಬಸ್ ಗೆ 300ಕ್ಕೂ ಹೆಚ್ಚು ಜನ ಮುಗಿಬೀಳುತ್ತಿರುವ ದೃಶ್ಯ ಕಂಡು ಬಂತು.
ನವರಾತ್ರಿ ಹಿನ್ನೆಲೆ ಶೃಂಗೇರಿ ದೇವಾಲಯ ತುಂಬಿ ತುಳುಕುತ್ತಿದೆ. ದೇವಾಲಯಗಳಿಗೆ ತೆರಳಲು ಶಕ್ತಿ ಯೋಜನೆಯ ಫ್ರೀ ಬಸ್ ಗೆ ಮಹಿಳಾ ಪ್ರಯಾಣಿಕರು ಮುಗಿ ಬಿದ್ದರು.
ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಶಕ್ತಿ ಯೋಜನೆ ಎಫೆಕ್ಟ್ ನಿಂದ ಪ್ರವಾಸಿ ಕೇಂದ್ರ ಫುಲ್ ರಶ್, ಜನರನ್ನು ನಿಯಂತ್ರಿಸಲು ಸಿಬ್ಬಂದಿ ಹೈರಾಣಾಗಿದ್ದಾರೆ.
ಶೃಂಗೇರಿಯಲ್ಲಿ ಬಸ್ ಹತ್ತಲು ಮುಗಿಬಿದ್ದ ಮಹಿಳೆಯರನ್ನು ನಿಭಾಯಿಸಲು ಡ್ರೈವರ್, ಕಂಡಕ್ಟರ್ ಹರಸಾಹಸಪಡುವಂತಾಗಿತ್ತು.