ಬಾಂಗ್ಲಾದೇಶದಿಂದ ಭಾರತಕ್ಕೆ ಶೇಖ್ ಹಸೀನಾ ಬಂದಿದ್ಯಾಕೆ.? ಇನ್ಮುಂದೆ ಭಾರತದಲ್ಲೇ ಇರ್ತಾರ.? ಕೇಂದ್ರ ಹೇಳಿದ್ದೇನು..? - Mahanayaka
11:10 AM Sunday 14 - September 2025

ಬಾಂಗ್ಲಾದೇಶದಿಂದ ಭಾರತಕ್ಕೆ ಶೇಖ್ ಹಸೀನಾ ಬಂದಿದ್ಯಾಕೆ.? ಇನ್ಮುಂದೆ ಭಾರತದಲ್ಲೇ ಇರ್ತಾರ.? ಕೇಂದ್ರ ಹೇಳಿದ್ದೇನು..?

06/08/2024

ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರು ಭಾರತದಲ್ಲಿದ್ದಾರೆ ಮತ್ತು ಕೆಲವು ಸಮಯ ಅವರು ಭಾರತದಲ್ಲೇ ಇರುತ್ತಾರೆ ಎಂದು ಸರ್ವ ಪಕ್ಷಸಭೆಗೆ ಸರ್ಕಾರ ತಿಳಿಸಿದೆ. ಹಸೀನಾ ಅವರು ಲಂಡನ್ ನಲ್ಲಿ ಆಶ್ರಯ ಪಡೆಯಲು ಬಯಸುತ್ತಿದ್ದು ಅಲ್ಲಿಂದ ಅನುಮತಿ ಬರುವವರೆಗೆ ಭಾರತದಲ್ಲಿ ಇರುತ್ತಾರೆ ಎಂದು ಇನ್ನೊಂದು ವರದಿ ತಿಳಿಸಿದೆ.


Provided by

ಹಸೀನಾ ಅವರು ಭಾರತಕ್ಕೆ ಬರುತ್ತಾರೆ ಎಂಬ ಸುದ್ದಿ ನಮಗೆ ದಿಢೀರ್ ಆಗಿ ಲಭಿಸಿತು. ಭಾರತದ ಮೂಲಕ ಇನ್ನೊಂದು ರಾಷ್ಟ್ರಕ್ಕೆ ಹೋಗಲು ಹಸೀನಾ ಬಯಸಿದ್ದರು. ಈ ವಿಷಯದಲ್ಲಿ ಹಸೀನಾ ಯಾವ ನಿರ್ಧಾರ ತಗೊಳ್ಳುತ್ತಾರೆ ಎಂಬ ಕುತೂಹಲ ಸರ್ಕಾರಕ್ಕಿದೆ. ಅದನ್ನು ತೀರ್ಮಾನಿಸುವ ಸಮಯವನ್ನು ಸರ್ಕಾರ ಅವರಿಗೆ ನೀಡಲಿದೆ. ಹಾಗೆಯೇ ಬಾಂಗ್ಲಾದೇಶ ಸೇನೆಯೊಂದಿಗೆ ಸರ್ಕಾರ ಸಂಪರ್ಕದಲ್ಲಿದೆ ಎಂದು ಸಚಿವ ಜಯಶಂಕರ್ ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ