ಹಸೀನಾ ಅರಮನೆಗೆ ನುಗ್ಗಿ ಪ್ರತಿಭಟನಾಕಾರರ ದಾಂಧಲೆ; ಸಿಕ್ಕ-ಸಿಕ್ಕ ವಸ್ತುಗಳ ಲೂಟಿ, ಸಂಭ್ರಮಾಚರಣೆ - Mahanayaka

ಹಸೀನಾ ಅರಮನೆಗೆ ನುಗ್ಗಿ ಪ್ರತಿಭಟನಾಕಾರರ ದಾಂಧಲೆ; ಸಿಕ್ಕ-ಸಿಕ್ಕ ವಸ್ತುಗಳ ಲೂಟಿ, ಸಂಭ್ರಮಾಚರಣೆ

06/08/2024

ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರ ಅರಮನೆಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿರುವ ವಸ್ತುಗಳನ್ನು ಎತ್ತಿಕೊಂಡು ಹೋಗುವುದು ಮತ್ತು ಹಸೀನಾ ಅವರ ಪದತ್ಯಾಗಕ್ಕೆ ಸಂಭ್ರಮಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿ ಪ್ರತಿಭಟನೆಗೆ ಅಂಜಿ ಹಸೀನಾ ಅವರು ಬಾಂಗ್ಲಾದೇಶ ಬಿಟ್ಟು ಭಾರತಕ್ಕೆ ಬಂದಿದ್ದಾರೆ.

ಹಸೀನಾ ಅವರ ಅರಮನೆ ಪ್ರವೇಶಿಸಿದ ಪ್ರತಿಭಟನಾಕಾರರು ಅಲ್ಲಿ ಆಹಾರ ಸೇವಿಸುವುದು ಅವರ ಕೋಣೆಯಲ್ಲಿ ಮಲಗುವುದು ಮುಂತಾದವುಗಳನ್ನು ಮಾಡುವುದು ವಿಡಿಯೋದಲ್ಲಿ ಕಾಣಿಸಿದೆ. ಫರ್ನಿಚರ್ ಗಳು ಪುಸ್ತಕಗಳು ಬೆಲೆಬಾಳುವ ಸಾರಿಗಳು ಚಹಾ ಕಪ್ ಗಳು ಟಿವಿ, ಪೇಂಟಿಂಗ್ ಗಳು ರೆಫ್ರಿಜರೇಟರ್ ಮುಂತಾದವುಗಳನ್ನು ಪ್ರತಿಭಟನಾಕಾರರು ಹೊತ್ತಯ್ಯುವುದು ಕೂಡ ವಿಡಿಯೋದಲ್ಲಿ ಕಾಣಿಸಿದೆ.

ಮಾಧ್ಯಮಗಳ ಕ್ಯಾಮರಗಳಿಗೆ ಕೈಬೀಸುತ್ತಲೇ ಪ್ರತಿಭಟನಾಕಾರರು ಈ ಎಲ್ಲ ಕೆಲಸವನ್ನು ಮಾಡಿದ್ದಾರೆ. ಹಾಗೆಯೇ ಹಸೀನ ಅವರ ತಂದೆ ಶೇಕ್ ಮುಜೀಬುರ್ರಹಮಾನ್ ಅವರ ಪ್ರತಿಮೆಯನ್ನು ಕೂಡ ಪ್ರತಿಭಟನಾಕಾರರು ಒಡೆದು ಹಾಕಿದ್ದಾರೆ. ಜಗತ್ತಿನಲ್ಲಿಯೇ ಅತ್ಯಂತ ಪ್ರಬಲ ನಾಯಕಿ ಎಂದು ಫೋಬ್ಸ್ ಪತ್ರಿಕೆ ಇತ್ತೀಚೆಗೆ ಹಸೀನ ಅವರನ್ನು ಉಲ್ಲೇಖಿಸಿತ್ತು. ಅಂತಹ ನಾಯಕಿ ಇದೀಗ ಬಾಂಗ್ಲಾದೇಶ ಬಿಟ್ಟು ಪರಾರಿಯಾಗಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ