ಮರ್ಮಾಂಗಕ್ಕೆ ಗಾಯ, ಮೂಗು ಓಪನ್ : ಅತ್ಯಂತ ಅಮಾನವೀಯವಾಗಿ ನಡೆದಿತ್ತು ರೇಣುಕಾಸ್ವಾಮಿ ಹತ್ಯೆ! - Mahanayaka

ಮರ್ಮಾಂಗಕ್ಕೆ ಗಾಯ, ಮೂಗು ಓಪನ್ : ಅತ್ಯಂತ ಅಮಾನವೀಯವಾಗಿ ನಡೆದಿತ್ತು ರೇಣುಕಾಸ್ವಾಮಿ ಹತ್ಯೆ!

darshan
11/06/2024

ಬೆಂಗಳೂರು: ರೇಣುಕಾಸ್ವಾಮಿ ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಯುವಕನ ಹತ್ಯೆ ಪ್ರಕರಣದ ಒಂದೊಂದೇ ವಿಚಾರಗಳು ಹೊರ ಬರುತ್ತಿದ್ದು, ಯುವಕನನ್ನು ಅತ್ಯಂತ ಅಮಾನವೀಯವಾಗಿ ಹತ್ಯೆ ಮಾಡಲಾಗಿತ್ತು ಎನ್ನುವ ಸ್ಫೋಟಕ ಅಂಶ ಬಯಲಾಗಿದೆ.


Provided by

ರೇಣುಕಾಸ್ವಾಮಿ ಅವರ ಮುಖದ ಮೂಳೆ ಮುರಿಯಲಾಗಿದೆ. ಮೂಗು ಓಪನ್ ಆಗುವಂತೆ ಗುದ್ದಿದ್ದಾರೆ. ಕಾಲಿನಿಂದ ಮರ್ಮಾಂಗಕ್ಕೆ ಒದೆಯಲಾಗಿದೆ. ಎಡಭಾಗದ ಪಕ್ಕೆಲುಬು ಕಟ್ ಆಗುವಂತೆ ಹಲ್ಲೆ ಮಾಡಲಾಗಿದೆ. ರೇಣುಕಾಸ್ವಾಮಿ ಅವರ ಕಾಲು ಮತ್ತು ಕೈಗೆ ಬ್ಯಾಟ್, ದೊಣ್ಣೆಯಿಂದ ಹಲ್ಲೆ ಮಾಡಲಾಗಿದೆ. ಮೃತ ವ್ಯಕ್ತಿಯ ಕಿವಿಗೆ ಹಾಗೂ ತಲೆಗೆ ಗಂಭೀರ ಗಾಯ ಆಗಿತ್ತು ಎಂದು ವರದಿಯಾಗಿದೆ.

ಚಿತ್ರದುರ್ಗ ನಗರದ ವಿಆರ್ ಎಸ್ ಬಡಾವಣೆಯ ನಿವಾಸಿಯಾಗಿರುವ ರೇಣುಕಾಸ್ವಾಮಿ ಕೆಇಬಿ ನಿವೃತ್ತ ನೌಕರ ಕಾಶಿನಾಥ್ ಶಿವಣ್ಣ ಗೌಡರ್ ಹಾಗೂ ರತ್ನಪ್ರಭ ಅವರ ಪುತ್ರನಾಗಿದ್ದಾನೆ.

ರೇಣುಕಾಸ್ವಾಮಿ  ಕಳೆದ ನಾಲ್ಕು ತಿಂಗಳುಗಳಿಂದ  ಅಪೋಲೋ ಮೆಡಿಕಲ್ ಶಾಪ್‌ ನಲ್ಲಿ ಕೆಲಸ ಮಾಡುತ್ತಿದ್ದ.  ಶನಿವಾರ ಬೆಳಗ್ಗೆ 10 ಗಂಟೆಗೆ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅವರು ತೆರಳಿದ್ದಾರೆ. ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ಬಾಲಾಜಿ ಬಾರ್ ಬಳಿ ರೇಣುಕಾಸ್ವಾಮಿ ಅವರ ಬೈಕ್ ಪತ್ತೆಯಾಗಿತ್ತು.  ಬಳಿಕ ಅವರು ಹತ್ಯೆಗೀಡಾಗಿರುವ ವಿಚಾರ ನಿನ್ನೆ ಮಧ್ಯಾಹ್ನ ಕಾಮಕ್ಷಿಪಾಳ್ಯ ಪೊಲೀಸರು ಪೋಷಕರಿಗೆ ತಿಳಿಸಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ