ಸೌದಿಯಿಂದ ರೀ ಎಂಟ್ರಿ ಅವಧಿಯನ್ನು ದೀರ್ಘಗೊಳಿಸಬೇಕೇ? ಇನ್ಮುಂದೆ ದ್ವಿಗುಣ ಶುಲ್ಕ ಕಟ್ಟಲೇಬೇಕು! - Mahanayaka

ಸೌದಿಯಿಂದ ರೀ ಎಂಟ್ರಿ ಅವಧಿಯನ್ನು ದೀರ್ಘಗೊಳಿಸಬೇಕೇ? ಇನ್ಮುಂದೆ ದ್ವಿಗುಣ ಶುಲ್ಕ ಕಟ್ಟಲೇಬೇಕು!

27/01/2025


Provided by

ಸೌದಿಯಿಂದ ರೀ ಎಂಟ್ರಿ ಅವಧಿಯನ್ನು ದೀರ್ಘಗೊಳಿಸಲು ಯಾರು ಬಯಸುತ್ತಾರೋ ಅವರು ದ್ವಿಗುಣ ಶುಲ್ಕವನ್ನು ಕಟ್ಟಬೇಕಾಗಿದೆ. ರಜಾ ಕಾಲದಲ್ಲಿ ಭಾರತಕ್ಕೆ ಬಂದವರು ರೀ ಎಂಟ್ರಿಯ ಅವಧಿಯನ್ನು ದೀರ್ಘ ಗೊಳಿಸಬೇಕಾದರೆ ಇನ್ನು ಮುಂದೆ ಡಬಲ್ ಫೀಸ್ ಅನ್ನು ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ.

ಈವರೆಗೆ ಒಂದು ತಿಂಗಳಿಗೆ 100 ರಿಯಾಲ್ ನೀಡಿ ರಿ ಎಂಟ್ರಿ ವೀಸಾವನ್ನು ದೀರ್ಘಗೊಳಿಸಬಹುದಾಗಿತ್ತು. ಇನ್ನು ಮುಂದೆ ಇದು 200 ರಿಯಾಲ್ ಆಗಲಿದೆ. ಎರಡು ತಿಂಗಳಿಗೆ 400 ರಿಯಾಲ್, ಮೂರು ತಿಂಗಳಿಗೆ 600 ರಿಯಾಲ್ ಮತ್ತು 4 ತಿಂಗಳಿಗೆ 800 ರಿಯಾಲ್ ನೀಡಬೇಕಾಗಿದೆ. ಒಂದು ವಾರ ಮೊದಲು ಬ್ಯಾಂಕುಗಳಲ್ಲಿ ಈ ಕುರಿತಾಗಿ ಹೊಸ ಅಪ್ಡೇಟ್ ಮಾಡಲಾಗಿದೆ.

ರಿ ಎಂಟ್ರಿ ವೀಸಾದಲ್ಲಿ ಸೌದಿ ಅರೇಬಿಯಾದಿಂದ ಹೊರಗಿದ್ದರೂ ರಿ ಎಂಟ್ರಿ ದೀರ್ಘಗೊಳಿಸಲು ಆನ್ಲೈನ್ ನಲ್ಲಿ ಸೌಲಭ್ಯವಿದೆ.ದೇಶದಿಂದ ಹೊರಗಿದ್ದರೂ ಇಕಾಮಾವನ್ನು ನವೀಕರಣಗೊಳಿಸಲು ಇದರಿಂದ ಸಾಧ್ಯವಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ