ವಿದ್ಯಾರ್ಥಿಯನ್ನು ಉಗ್ರವಾದಿ ಎಂದು ಕರೆದ ಶಿಕ್ಷಕ: ಅಧ್ಯಾಪಕನಿಗೆ 'ರಜೆ'ಯ ಶಿಕ್ಷೆ - Mahanayaka
2:49 PM Saturday 15 - February 2025

ವಿದ್ಯಾರ್ಥಿಯನ್ನು ಉಗ್ರವಾದಿ ಎಂದು ಕರೆದ ಶಿಕ್ಷಕ: ಅಧ್ಯಾಪಕನಿಗೆ ‘ರಜೆ’ಯ ಶಿಕ್ಷೆ

27/01/2025

ಫೆಲೆಸ್ತೀನ್ ಮೂಲದ ಅಮೆರಿಕನ್ ವಿದ್ಯಾರ್ಥಿಯನ್ನು ಉಗ್ರವಾದಿ ಎಂದು ಕರೆದ ಶಿಕ್ಷಕರನ್ನು ಅಮೇರಿಕಾದಲ್ಲಿ ರಜೆಯಲ್ಲಿ ಕಳುಹಿಸಿಕೊಡಲಾಗಿದೆ. ಅಮೆರಿಕದಲ್ಲಿ ಮುಸ್ಲಿಂ ವಿರೋಧಿ, ಫೆಲೆಸ್ತೀನ್ ವಿರೋಧಿ ಪ್ರಕರಣಗಳು ಹೆಚ್ಚಾಗುತ್ತಿರುವುದರ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಫೆಲೆಸ್ತೀನ್ ಮೂಲದ ಅಮೆರಿಕನ್ ವಿದ್ಯಾರ್ಥಿ ಸೀಟ್ ಬದಲಾವಣೆಯ ಬಗ್ಗೆ ಟೀಚರಲ್ಲಿ ಕೇಳಿಕೊಂಡಾಗ ನಾನು ಉಗ್ರವಾದಿಗಳೊಂದಿಗೆ ಮಾತಾಡಲ್ಲ ಎಂದು ಹೇಳಿರುವುದಾಗಿ ಕೌನ್ಸಿಲ್ ಆನ್ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ ನ ಮುಖ್ಯಸ್ಥರು ಪ್ರಕರಣವನ್ನು ವಿವರಿಸಿದ್ದಾರೆ. ಮಾತ್ರ ಅಲ್ಲ ಮಗುವಿನ ಹೆತ್ತವರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಅಮೆರಿಕದಲ್ಲಿ ಇತ್ತೀಚೆಗೆ ಫೆಲಸ್ತೀನ್ ಮೂಲದವರ ಮೇಲೆ ಹಿಂಸೆಗಳು ಹೆಚ್ಚುತ್ತಿವೆ ಇತ್ತೀಚಿಗಷ್ಟೇ ಫೆಲೆ ಸ್ತೀನ್ ಮೂಲದ ಮೂರು ವರ್ಷದ ಮಗುವನ್ನು ಟೆಕ್ಸಾಸ್ ನಲ್ಲಿ ಅಪಹರಿಸಲು ಯತ್ನಿಸಲಾಗಿತ್ತು. ಹಾಗೆಯೇ ಆರು ವರ್ಷದ ಫೆಲಸ್ತೀನ್ ಬಾಲಕನನ್ನು ತೀವ್ರವಾಗಿ ಇರಿದು ಗಾಯಗೊಳಿಸಲಾಗಿತ್ತು. ಹಾಗೆಯೇ ನ್ಯೂಯಾರ್ಕ್ ನಲ್ಲಿ ಕ್ಯಾಲಿಫೋರ್ನಿಯ ಮತ್ತು ವರ್ಮೌಂಟ್ ನಲ್ಲಿ ಫೆಲೆಸ್ತೀನ್ ಮೂಲದ ವಿದ್ಯಾರ್ಥಿಗಳು ಮತ್ತು ಇತರರ ಮೇಲೆ ಹಲ್ಲೆ ನಡೆದಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ