ಸಿಂಗಾಪುರದಲ್ಲಿ ಸಾಬೀತಾಯಿತು ಮಾದಕದ್ರವ್ಯ ಸಾಗಾಟ ಪ್ರಕರಣ: ತಪ್ಪಿತಸ್ಥೆ ಮಹಿಳೆಗೆ ಮರಣದಂಡನೆ - Mahanayaka

ಸಿಂಗಾಪುರದಲ್ಲಿ ಸಾಬೀತಾಯಿತು ಮಾದಕದ್ರವ್ಯ ಸಾಗಾಟ ಪ್ರಕರಣ: ತಪ್ಪಿತಸ್ಥೆ ಮಹಿಳೆಗೆ ಮರಣದಂಡನೆ

29/07/2023


Provided by

ಮಾದಕದ್ರವ್ಯ ಸಾಗಾಟ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಮಹಿಳೆಯನ್ನು ಸಿಂಗಾಪುರದಲ್ಲಿ ಗಲ್ಲಿಗೇರಿಸಲಾಗಿದೆ. ಕಳೆದ 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಸಿಂಗಾಪುರದಲ್ಲಿ ಮರಣ ದಂಡನೆಗೆ ಗುರಿಪಡಿಸಲಾಗಿದೆ.

2018 ರಲ್ಲಿ 31 ಗ್ರಾಂ ಹೆರಾಯಿನ್‌ ಮಾದಕವಸ್ತುವನ್ನು ಕಳ್ಳಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸರಿದೇವಿ ಬಿಂಟೆ ಜಮಾನಿ ಎಂಬಾಕೆಯನ್ನು ಗಲ್ಲಿಗೇರಿಸಲಾಯಿತು ಎಂದು ಸಿಂಗಾಪುರದ ಕೇಂದ್ರ ಮಾದಕ ದ್ರವ್ಯ ಬ್ಯೂರೋ ಹೇಳಿಕೆಯಲ್ಲಿ ತಿಳಿಸಿದೆ.

ಸಿಂಗಾಪುರದ ಕಾನೂನಿನ ಪ್ರಕಾರ, 15 ಗ್ರಾಂಗಿಂತ ಹೆಚ್ಚು ಹೆರಾಯಿನ್ ಮತ್ತು 500 ಗ್ರಾಂ ಗಿಂತ ಹೆಚ್ಚಿನ ಪ್ರಮಾಣದ ಗಾಂಜಾ ಸಾಗಣೆ ಮಾಡಿದರೆ ಮರಣದಂಡನೆ ಶಿಕ್ಷೆಯನ್ನು ವಿಧಿಸಬಹುದು.
ಸಿಂಗಾಪುರ ಮೂಲದ ಮಾನವ ಹಕ್ಕುಗಳ ಹೋರಾಟ ಸಂಸ್ಥೆ ಟ್ರಾನ್ಸ್‌ಫಾರ್ಮೇಟಿವ್ ಜಸ್ಟೀಸ್ ಕಲೆಕ್ಟಿವ್ ಪ್ರಕಾರ, ಸಿಂಗಾಪುರದಲ್ಲಿ ಮರಣದಂಡನೆಗೆ ಗುರಿಯಾಗಿರುವ ಇಬ್ಬರು ಮಹಿಳೆಯರಲ್ಲಿ ಸರಿದೇವಿ ಕೂಡಾ ಒಬ್ಬರಾಗಿದ್ದು, ಅದಕ್ಕೂ ಮುನ್ನ 2004 ರಲ್ಲಿ ಯೆನ್ ಮೇ ವೋನ್ ಎಂಬಾಕೆಯನ್ನು ಡ್ರಗ್ಸ್ ಕಳ್ಳಸಾಗಣೆ‌ ಮಾಡಿದಕ್ಕಾಗಿ ಗಲ್ಲಿಗೇರಿಸಲಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ