ಶಿವಾಜಿ ಪ್ರತಿಮೆ ಕುಸಿತ ಪ್ರಕರಣ: ಪ್ರಧಾನಿ ಮೋದಿ ಕ್ಷಮೆಯಾಚಿಸುವಾಗ ಅಹಂಕಾರ ತೋರಿದ್ದಾರೆ: ಉದ್ಧವ್ ಠಾಕ್ರೆ ಟೀಕೆ - Mahanayaka

ಶಿವಾಜಿ ಪ್ರತಿಮೆ ಕುಸಿತ ಪ್ರಕರಣ: ಪ್ರಧಾನಿ ಮೋದಿ ಕ್ಷಮೆಯಾಚಿಸುವಾಗ ಅಹಂಕಾರ ತೋರಿದ್ದಾರೆ: ಉದ್ಧವ್ ಠಾಕ್ರೆ ಟೀಕೆ

01/09/2024


Provided by

ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ಕುಸಿದಿದ್ದಕ್ಕಾಗಿ ಕ್ಷಮೆಯಾಚಿಸುವಾಗ ಪ್ರಧಾನಿ ನರೇಂದ್ರ ಮೋದಿ ಅಹಂಕಾರವನ್ನು ಪ್ರದರ್ಶಿಸಿದ್ದಾರೆ ಎಂದು ಶಿವಸೇನೆ (ಯುಬಿಟಿ) ಮುಖಂಡ ಉದ್ಧವ್ ಠಾಕ್ರೆ ಟೀಕಿಸಿದ್ದಾರೆ. ಮುಂಬೈನಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಹಾರಾಷ್ಟ್ರದ ಜನರು ಪ್ರಧಾನಿಯ ಕ್ಷಮೆಯಾಚನೆಯನ್ನು ಸ್ವೀಕರಿಸುವುದಿಲ್ಲ‌‌. ಇದು ಪ್ರಾಮಾಣಿಕವಲ್ಲ ಮತ್ತು ಅಹಂಕಾರದಿಂದ ತುಂಬಿದೆ ಎಂದು ಠಾಕ್ರೆ ಹೇಳಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿಯವರ ಕ್ಷಮೆಯಾಚನೆಯಲ್ಲಿನ ಅಹಂಕಾರವನ್ನು ನೀವು ಗಮನಿಸಿದ್ದೀರಾ..? ಅದು ಅಹಂಕಾರದಿಂದ ಕೂಡಿತ್ತು. ಓರ್ವ ಉಪ ಮುಖ್ಯಮಂತ್ರಿ ನಗುತ್ತಿದ್ದರು. ತಪ್ಪನ್ನು ಕ್ಷಮಿಸಲಾಗುವುದಿಲ್ಲ.

‘ಬಿಜೆಪಿ ಭಾರತದಿಂದ ಹೊರಹೋಗಿ’ ಎಂದು ಒತ್ತಾಯಿಸಲು ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಪ್ರಧಾನಿ ಯಾಕೆ ಕ್ಷಮೆ ಕೇಳುತ್ತಿದ್ದಾರೆ? ಎಂಟು ತಿಂಗಳ ಹಿಂದೆ ಅವರು ಪ್ರತಿಮೆಯನ್ನು ಉದ್ಘಾಟಿಸಿದರು. ಇದರಲ್ಲಿ ಒಳಗೊಂಡಿರುವ ಭ್ರಷ್ಟಾಚಾರಕ್ಕಾಗಿಯಾ ಅವರು ಕ್ಷಮೆಯಾಚಿಸಿದ್ದು ಎಂದು ಅವರು ಪ್ರಶ್ನಿಸಿದರು.

ಶಿವಸೇನೆ, ಬಿಜೆಪಿ ಮತ್ತು ಎನ್ಸಿಪಿಯ ಮಾಯಾಹುತಿ ಸಮ್ಮಿಶ್ರ ಸರ್ಕಾರದ ವಿರುದ್ಧದ ‘ಜೋಡೆ ಮಾರೋ’ (ಪಾದರಕ್ಷೆಗಳಿಂದ ಹೊಡೆಯಲಾಗಿದೆ) ಪ್ರತಿಭಟನೆಯ ಸಂದರ್ಭದಲ್ಲಿ ಜನಸಮೂಹವನ್ನುದ್ದೇಶಿಸಿ ಮಾತನಾಡುವಾಗ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ.
ಪ್ರತಿಭಟನಾ ಮೆರವಣಿಗೆಯು ಐತಿಹಾಸಿಕ ಹುತತ್ಮಾ ಚೌಕ್ನಿಂದ ಪ್ರಾರಂಭವಾಯಿತು ಮತ್ತು ದಕ್ಷಿಣ ಮುಂಬೈ ಗೇಟ್ ಆಫ್ ಇಂಡಿಯಾ ಕಡೆಗೆ ಸಾಗಿತು. ಸಿಂಧುದುರ್ಗ್ ಜಿಲ್ಲೆಯಲ್ಲಿರುವ ಈ ಪ್ರತಿಮೆಯನ್ನು ಪ್ರಧಾನಿ ಮೋದಿ ಅವರು 2023ರ ಡಿಸೆಂಬರ್ 4ರಂದು ನೌಕಾ ದಿನಾಚರಣೆಯ ಸಂದರ್ಭದಲ್ಲಿ ಅನಾವರಣಗೊಳಿಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ