ದರ್ಶನ್ ಅಭಿಮಾನಿಗಳು ಮತ್ತು ಸುದ್ದಿವಾಹಿನಿಗಳ ಆ್ಯಂಕರ್ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಕದನ! - Mahanayaka
12:01 AM Tuesday 28 - October 2025

ದರ್ಶನ್ ಅಭಿಮಾನಿಗಳು ಮತ್ತು ಸುದ್ದಿವಾಹಿನಿಗಳ ಆ್ಯಂಕರ್ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಕದನ!

d boss
14/06/2024

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್  ಹಾಗೂ ಗ್ಯಾಂಗ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇನ್ನೊಂದೆಡೆಯಲ್ಲಿ ನಟ ದರ್ಶನ್ ಹಾಗೂ ಸುದ್ದಿವಾಹಿನಿಗಳ ಆ್ಯಂಕರ್ ಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕದನ ಶುರುವಾಗಿದೆ.

ರಾಜ್ಯದ ಪ್ರಮುಖ ಸುದ್ದಿವಾಹಿನಿಗಳ ಆ್ಯಂಕರ್ ಗಳು ದರ್ಶನ್ ಪ್ರಕರಣವನ್ನು ಮುಂದಿಟ್ಟುಕೊಂಡು ದರ್ಶನ್ ಫ್ಯಾನ್ಸ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿರುವುದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ. ಜೊತೆಗೆ ದರ್ಶನ್ ಕೇಸ್ ಗೆ ಸಂಬಂಧಿಸಿದಂತೆ ಸುದ್ದಿವಾಚಕರು ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಬಳಸಿಕೊಂಡು ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿರುವುದು ಎಷ್ಟು ಸರಿ? ಇಂತಹ ಕೇಸ್ ನಲ್ಲಿ ಪುನೀತ್ ಹೆಸರನ್ನು ತಂದು ಹೋಲಿಕೆ ಮಾಡಬೇಕಾದ ಅವಶ್ಯಕತೆ ಇದೆಯೇ? ಎನ್ನುವ ಪ್ರಶ್ನೆಗಳು ಕೂಡ ಕೇಳಿ ಬಂದಿವೆ.

ದರ್ಶನ್ ಅಭಿಮಾನಿಗಳು ಹೇಳುತ್ತಿರೋದೇನು?:

* ಈ ಪ್ರಕರಣದಲ್ಲಿ ದರ್ಶನ್ ತಪ್ಪು ಮಾಡಿದ್ದರೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿ.

*  ಒಂದು ವೇಳೆ ತಪ್ಪಿತಸ್ಥ ಅಲ್ಲ ಎಂದು ಕೋರ್ಟ್ ತೀರ್ಪು ನೀಡಿದರೆ ದರ್ಶನ್ ಅವರು ಮಾಧ್ಯಮಗಳ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಬೇಕು. ಎಲ್ಲಾ ಆ್ಯಂಕರ್ ಗಳಿಗೆ ಬಿಸಿಮುಟ್ಟಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದರ್ಶನ್ ಪ್ರಕರಣ ಆರಂಭದಿಂದಲೇ ಸುದ್ದಿವಾಹಿನಿಗಳ ಆ್ಯಂಕರ್ ಗಳು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಫೈಟ್ ಆರಂಭವಾಗಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅಭಿಮಾನಿಗಳು ಸುದ್ದಿವಾಹಿನಿಗಳ ಕೆಲವು ಆ್ಯಂಕರ್ ಗಳ ಬಗ್ಗೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಎಲ್ಲಿಗೆ ತಲುಪುತ್ತದೋ ಕಾದು ನೋಡಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ