ವೇಗವಾಗಿ ಬಂದು ಟ್ರಕ್ ನಡಿಗೆ ನುಗ್ಗಿದ ಕಾರು: ದಂಪತಿ ಸಾವು - Mahanayaka

ವೇಗವಾಗಿ ಬಂದು ಟ್ರಕ್ ನಡಿಗೆ ನುಗ್ಗಿದ ಕಾರು: ದಂಪತಿ ಸಾವು

thelangana
23/04/2024


Provided by

ತೆಲಂಗಾಣ: ಹೆದ್ದಾರಿಯಲ್ಲಿ ಕೆಟ್ಟು ನಿಂತ ಟ್ರಕ್ ನಡಿಗೆ ಕಾರೊಂದು ವೇಗವಾಗಿ ನುಗ್ಗಿದ ಪರಿಣಾಮ ಕಾರಿನಲ್ಲಿದ್ದ ದಂಪತಿ ಸಾವನ್ನಪ್ಪಿದ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತರನ್ನು ಎಸ್.ನವೀನ್ ರಾಜ್ (29) ಮತ್ತು ಅವರ ಪತ್ನಿ ಭಾರ್ಗವಿ (27)ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ: ಮಹಿಳೆ ಮತ್ತು ಆಕೆಯ ಪತಿ ಹುಟ್ಟುಹಬ್ಬವನ್ನು ಆಚರಿಸಿಕೊಂಡು ವಿಜಯವಾಡದಲ್ಲಿರುವ ಮನೆಗೆ ಹೋಗುತ್ತಿದ್ದಾಗ ಮುಕುಂದಪುರಂನಲ್ಲಿ ಅಪಘಾತ ಸಂಭವಿಸಿದೆ ಎಂದು ಮುನಗಾಲ ಪೊಲೀಸ್ ಠಾಣಾ ಇನ್ ಸ್ಪೆಕ್ಟರ್ ರಾಮಕೃಷ್ಣ ರೆಡ್ಡಿ ತಿಳಿಸಿದ್ದಾರೆ.

ಅಪಘಾತದ ತೀವ್ರತೆಗೆ ಕಾರು ಟ್ರಕ್ ನ ಕೆಳಗೆ ಸಿಲುಕಿ ಜಖಂಗೊಂಡಿತ್ತು. ಟ್ರಕ್ ನ ಅಡಿಯಿಂದ ಕಾರನ್ನು ಮೇಲೆತ್ತಲು ಕ್ರೇನ್ ಮತ್ತು ಜೆಸಿಬಿಗಳನ್ನು ಬಳಸಲಾಗಿದ್ದು, ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ಸತತ ಪ್ರಯತ್ನದ ನಂತರ ಕಾರನ್ನು ಹೊರತೆಗೆಯಲಾಯಿತು. ಅಪಘಾತದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿhttps://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ