ಸರ್ಕಾರಿ ಅಧಿಕಾರಿಗಳು ಸರಿಯಾಗಿ ಕೆಲ್ಸ ಮಾಡಿ: ಇಲ್ಲದಿದ್ರೆ ಮಾಟ, ಮಂತ್ರ ಮಾಡಿಸ್ತೀನಿ ಎಂದ ಬಿಜೆಪಿ ಸಂಸದ - Mahanayaka
4:04 PM Wednesday 20 - August 2025

ಸರ್ಕಾರಿ ಅಧಿಕಾರಿಗಳು ಸರಿಯಾಗಿ ಕೆಲ್ಸ ಮಾಡಿ: ಇಲ್ಲದಿದ್ರೆ ಮಾಟ, ಮಂತ್ರ ಮಾಡಿಸ್ತೀನಿ ಎಂದ ಬಿಜೆಪಿ ಸಂಸದ

18/10/2024


Provided by

ಸರ್ಕಾರಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ರೆ ನಿಂಬೆ ಹಣ್ಣು ಕತ್ತರಿಸಿ ಮಾಟ, ಮಂತ್ರದ ಮೂಲಕ ಅವರ ದೆವ್ವ ಬಿಡಿಸುತ್ತೇನೆ ಎಂದು ಛತ್ತೀಸ್‌ಗಢದ ಬಿಜೆಪಿ ಸಂಸದ ಭೋಜರಾಜ್ ನಾಗ್ ಹೇಳಿದ್ದಾರೆ. ಬಿಜೆಪಿಯಲ್ಲಿ ಮೂಢನಂಬಿಕೆ ಮನೆ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ನಿರ್ಲಕ್ಷ್ಯದ ಮೂಲಕ ಹಾಳು ಮಾಡುತ್ತಿದ್ದಾರೆ. ಅವರು ಸರಿಯಾಗಿ ಜವಾಬ್ದಾರಿ ನಿರ್ವಹಿಸದಿದ್ದರೆ, ಪ್ರತಿಯೊಬ್ಬರ ಹೆಸರಿನಲ್ಲೂ ನಿಂಬೆ ಹಣ್ಣು ಕತ್ತರಿಸುತ್ತೇನೆ” ಎಂದು ಸಂಸದ ನಾಗ್ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಛತ್ತೀಸ್‌ಗಢದ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್, ಜನಪ್ರತಿನಿಧಿಯೊಬ್ಬರು ಇಂತಹ ಹೇಳಿಕೆ ನೀಡಿರುವುದು ದುರದೃಷ್ಟಕರ ಸಂಗತಿ. ಭಾರತೀಯ ಜನತಾ ಪಕ್ಷದೊಳಗೆ ಮೂಢನಂಬಿಕೆ ಆಳವಾಗಿದೆ. ಕೊರೋನಾ ಓಡಿಸಲು ಚಪ್ಪಾಳೆ ತಟ್ಟಲು ಮತ್ತು ತಟ್ಟೆ ಬಡಿಯಲು ಪ್ರಧಾನಿ ಮೋದಿ ಸೂಚಿಸಿದ್ದರು. ಆ ಮೌಢ್ಯತೆ ಈಗ ಅವರ ಅನುಯಾಯಿಗಳಲ್ಲಿ ಪ್ರತಿಧ್ವನಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ