ಮಹಾರಾಷ್ಟ್ರ ಚುನಾವಣೆ: ಸೀಟು ಹಂಚಿಕೆ ಒಪ್ಪಂದ ಅಂತಿಮಗೊಳಿಸಿದ ಮಹಾ ವಿಕಾಸ್ ಅಘಾಡಿ - Mahanayaka

ಮಹಾರಾಷ್ಟ್ರ ಚುನಾವಣೆ: ಸೀಟು ಹಂಚಿಕೆ ಒಪ್ಪಂದ ಅಂತಿಮಗೊಳಿಸಿದ ಮಹಾ ವಿಕಾಸ್ ಅಘಾಡಿ

18/10/2024

ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳ ಪೈಕಿ 260 ಸ್ಥಾನಗಳಿಗೆ ಮಹಾ ವಿಕಾಸ್ ಅಘಾಡಿ ಗುರುವಾರ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದ್ದು, ಉಳಿದ ಕ್ಷೇತ್ರಗಳಲ್ಲಿ ಮಿತ್ರ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಬಹುದೊಡ್ಡ ಪಾಲನ್ನು ತನ್ನದಾಗಿಸಿಕೊಂಡಿದೆ.

ಕಾಂಗ್ರೆಸ್ 110 ರಿಂದ 115 ಸ್ಥಾನಗಳಲ್ಲಿ, ಶಿವಸೇನೆ(ಯುಬಿಟಿ) 83 ರಿಂದ 86 ಮತ್ತು ಎನ್‌ಸಿಪಿ(ಎಸ್‌ಪಿ) 72 ರಿಂದ 75 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಮೈತ್ರಿಕೂಟದ ನಾಯಕರು ತಿಳಿಸಿದ್ದಾರೆ. ವಿವಾದಿತ 20 ರಿಂದ 25 ಸ್ಥಾನಗಳಲ್ಲೂ ಶೀಘ್ರದಲ್ಲೇ ಒಮ್ಮತಕ್ಕೆ ಬರಲಾಗುವುದು ಎಂದು ಅವರು ಹೇಳಿದ್ದಾರೆ.

ಸಮಾಜವಾದಿ ಪಕ್ಷಕ್ಕೆ ಎರಡರಿಂದ ಮೂರು ಸ್ಥಾನಗಳನ್ನು ನೀಡಲಾಗುವುದು. ಎಡಪಕ್ಷಗಳಿಗೂ ಎರಡರಿಂದ ಮೂರು ಸ್ಥಾನಗಳು ಮತ್ತು ರೈತರು ಹಾಗೂ ಕಾರ್ಮಿಕರ ಪಕ್ಷಕ್ಕೆ ಎರಡರಿಂದ ಮೂರು ಸ್ಥಾನಗಳನ್ನು ವಿಧಾನಸಭಾ ಚುನಾವಣೆಯಲ್ಲಿ ನೀಡಲಾಗುವುದು” ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಎಲ್ಲಾ ಮೈತ್ರಿ ಪಾಲುದಾರರು ಈ ನಿರ್ದಿಷ್ಟ ಸ್ಥಾನಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಆದ್ದರಿಂದ ಒಪ್ಪಂದಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತಿದೆ. ಗೆಲ್ಲುವ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲರನ್ನೂ ತೃಪ್ತಿಪಡಿಸುವ ಸೂತ್ರವನ್ನು ರೂಪಿಸುತ್ತಿದ್ದೇವೆ’ ಎಂದು ಸೀಟು ಹಂಚಿಕೆ ಸಭೆಯಲ್ಲಿ ಪಾಲ್ಗೊಂಡಿದ್ದ ಎಂವಿಎ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ