ಎಸೆಸೆಲ್ಸಿ ವಿದ್ಯಾರ್ಥಿನಿಯ ಮೇಲೆ ಯುವಕನಿಂದ ಅತ್ಯಾಚಾರ! | ಆರೋಪಿ ಅರೆಸ್ಟ್ - Mahanayaka
4:35 PM Saturday 18 - October 2025

ಎಸೆಸೆಲ್ಸಿ ವಿದ್ಯಾರ್ಥಿನಿಯ ಮೇಲೆ ಯುವಕನಿಂದ ಅತ್ಯಾಚಾರ! | ಆರೋಪಿ ಅರೆಸ್ಟ್

shanivara sante
06/04/2021

ಶನಿವಾರಸಂತೆ: 10ನೇ ತರಗತಿ ವಿದ್ಯಾರ್ಥಿನಿಯೋರ್ವಳನ್ನು ಯುವಕನೋರ್ವ ಅತ್ಯಾಚಾರ ನಡೆಸಿರುವ ಘಟನೆ ಆಲೂರು -ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದರ ಗಿರಿಜನ ಹಾಡಿಯಲ್ಲಿ ನಡೆದಿದೆ.


Provided by

20 ವರ್ಷ ವಯಸ್ಸಿನ ಲೋಹಿತ್ ಎಂಬಾತ ಅತ್ಯಾಚಾರ ಆರೋಪಿಯಾಗಿದ್ದು, ಬಾಲಕಿಯ ತಾಯಿ ಹಾಡಿಯ ಕೂಲಿಕಾರ್ಮಿಕ ಮಹಿಳೆಯಾಗಿದ್ದು, ತಂದೆ 15 ವರ್ಷಗಳ ಹಿಂದೆಯೇ ನಾಪತ್ತೆಯಾಗಿದ್ದಾರೆ. 10ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಬಾಲಕಿ, ಮನೆಯಲ್ಲಿಯೇ ಇರುತ್ತಿದ್ದಳು ಎಂದು ತಿಳಿದು ಬಂದಿದೆ.

ಬಾಲಕಿಯನ್ನು ಕಂಡು ಅನುಮಾನಗೊಂಡ ಆಶಾಕಾರ್ಯಕರ್ತೆಯರು ಆಲೂರು ಸಿದ್ದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಬಾಲಕಿ 6 ತಿಂಗಳ ಗರ್ಭಿಣಿ ಎಂಬ ವಿಚಾರ  ತಿಳಿದು ಬಂದಿದ್ದು, ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಲೋಹಿತ್ ಎಂಬಾತ 1 ವರ್ಷದಿಂದ ತನ್ನನ್ನು ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ನಂಬಿಸಿ ಈ ರೀತಿ ಮಾಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಂದು ಹಲವಾರು ಬಾರಿ ಅತ್ಯಾಚಾರವೆ ಎಸಗಿದ್ದಾನೆ ಎಂದು ಬಾಲಕಿ ತಿಳಿಸಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದ್ದು, ಆರೋಪಿ ಲೋಹಿತ್ ನನ್ನು ಬಂಧಿಸಿ ನ್ಯಾಯಾಲಯಕ್ಕ ಹಾಜರುಪಡಿಸಲಾಗಿದೆ.

ಇತ್ತೀಚಿನ ಸುದ್ದಿ