ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದೆ 1,513 ಆಫೀಸರ್ ಹುದ್ದೆಗಳು: ಅರ್ಜಿ ಸಲ್ಲಿಸೋದು ಹೇಗೆ?
State Bank of India Recruitment 2024 — ಭಾರತ ದೇಶದ ಟಾಪ್ ಬ್ಯಾಂಕಗಳಲ್ಲಿ ಒಂದಾಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ.
ಭಾರತ ದೇಶಾದ್ಯಂತ ಒಟ್ಟು 1,513 ಹುದ್ದೆಗಳು ಖಾಲಿ ಇವೆ. ಈ ನೇಮಕಾತಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 14, 2024 ಆರಂಭವಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿ ಅಕ್ಟೋಬರ್ 4, 2024ಕ್ಕೆ ನಿಗದಿಪಡಿಸಿದೆ. ಅರ್ಹ ಮತ್ತು ಆಸಕ್ತರಿರುವ ಅಭ್ಯರ್ಥಿಗಳು ನೇಮಕಾತಿಯ ಅಧಿಕೃತ ಅರ್ಹತೆಗಳನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿರಿ.
ಅರ್ಹತೆಗಳ ವಿವರ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂಥವರು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಅಂಡ್ ಡೆಲಿವರಿ, ನೆಟ್ವರ್ಕಿಂಗ್ ಆಪರೇಷನ್ಸ್ ಮತ್ತು ಇನ್ಫಾರ್ಮಶನ್ ಸೆಕ್ಯೂರಿಟಿ ವಿಭಾಗ, ಕಂಪ್ಯೂಟರ್ ಸೈನ್ಸ್, ಬಿ.ಟೆಕ್ ಸೇರಿದಂತೆ ವಿವಿಧ ಅರ್ಹ ವಿಷಯಗಳಲ್ಲಿ ಪದವಿ ಮುಗಿಸಿರುವಂಥವರು ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅನುಗುಣವಾಗಿ ಅಗತ್ಯವಿರುವ ಸಂಪೂರ್ಣ ಅರ್ಹತೆಗಳ ವಿವರಕ್ಕಾಗಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಧಿಸೂಚನೆಯನ್ನು ವಿವರವಾಗಿ ಪರಿಶೀಲಿಸಿಕೊಳ್ಳಿ.
ವಯೋಮಿತಿ ಅರ್ಹತೆಗಳು :
* ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಕನಿಷ್ಠ 25ರಿಂದ ಗರಿಷ್ಠ 35 ವರ್ಷದ ವಯೋಮಿತಿಯಲ್ಲಿರಬೇಕು.
* ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ 21 ರಿಂದ 30 ವರ್ಷದ ಒಳಗಿರಬೇಕು.
* ಡೆಪ್ಯೂಟಿ ವೈಸ್ ಪ್ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ 36 ರಿಂದ 45 ವರ್ಷದ ಒಳಗಿರಬೇಕು.
* ಅಸಿಸ್ಟಂಟ್ ವೈಸ್ ಪ್ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ 32 ರಿಂದ 42 ವರ್ಷದ ಒಳಗಿರಬೇಕು.
ಆಯ್ಕೆ ವಿಧಾನ ಹೇಗೆ ಇರಲಿದೆ?
ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಆನ್ಲೈನ್ ಪರೀಕ್ಷೆ, ನಂತರದಲ್ಲಿ ಸಂದರ್ಶನ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇನ್ನುಳಿದ ಹುದ್ದೆಗಳಿಗೆ ಕೇವಲ ಸಂದರ್ಶನದ ಮುಖಾಂತರ ನೇಮಕಾತಿ ಮಾಡಿಕೊಳ್ಳುವುದಾಗಿ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿಯೂ ಕೂಡ ಬೆಂಗಳೂರು ಮಂಗಳೂರು ಮತ್ತು ಹುಬ್ಬಳ್ಳಿ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಇಡಲಾಗಿದೆ.
ಪ್ರಮುಖ ವಿಷಯ : ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 04, 2024 ವಾಗಿರುತ್ತದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ನಿಗದಿತ ಕೊನೆಯ ದಿನಾಂಕದ ಒಳಗಾಗಿಯೇ ಅರ್ಜಿ ಸಲ್ಲಿಸಿರಿ.
ಅರ್ಜಿ ಸಲ್ಲಿಸುವ ಅಧಿಕೃತ ಜಾಲತಾಣದ ಲಿಂಕ್ – https://sbi.co.in
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: