ಗ್ಯಾಸ್ ಡೆಲಿವರಿ ನೆಪದಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ: ಡೆಲಿವರಿ ಬಾಯ್ ಅರೆಸ್ಟ್

ಚಾಮರಾಜನಗರ: ಗ್ಯಾಸ್ ಡೆಲಿವರಿ ನೆಪದಲ್ಲಿ ಡೆಲಿವರಿ ಬಾಯ್ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ನಡೆದಿದೆ.
ಗ್ಯಾಸ್ ಏಜೆನ್ಸಿಯ ಡೆಲಿವರಿ ಬಾಯ್ ಮಹೇಶ್ ಎಂಬಾತನ ವಿರುದ್ಧ ಅತ್ಯಾಚಾರಕ್ಕೆ ಯತ್ನಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ. ಸದ್ಯ ನೊಂದ ಮಹಿಳೆ ನೀಡಿರುವ ದೂರಿನಂತೆ ಎಫ್ ಐಆರ್ ದಾಖಲಿಸಲಾಗಿದೆ.
ಮೇ 21ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಾಹ್ನ 12:30ರ ವೇಳೆ ಮಹಿಳೆಯ ಮನೆಗೆ ಬಂದಿದ್ದ ಡೆಲಿವರಿ ಬಾಯ್ ಮಹೇಶ್, ಬಾಗಿಲು ಬಡಿದಿದ್ದಾನೆ. ಯಾರು ಎಂದು ಕೇಳಿದ ವೇಳೆ ಗ್ಯಾಸ್ ಡೆಲಿವರಿ ಮಾಡುವವನು ಎಂದಿದ್ದಾನೆ. ನಾನು ಗ್ಯಾಸ್ ಬುಕ್ ಮಾಡಿಲ್ಲ ಎಂದಾಗ, ಬುಕ್ ಮಾಡದಿದ್ದರೂ ಕೊಡುತ್ತೇವೆ, ಖಾಲಿ ಇದ್ರೆ ತೆಗೆದುಕೊಳ್ಳಿ ಎಂದಿದ್ದಾನೆ.
ಮಹಿಳೆ ಬಳಿ 920 ರೂ. ಹಣವನ್ನೂ ಗ್ಯಾಸ್ ಗಾಗಿ ಪಡೆದುಕೊಂಡಿದ್ದು, ಬಳಿಕ ಗ್ಯಾಸ್ ಕಂಪೆನಿ ಕಡೆಯಿಂದ ಕೆವೈಸಿ ಮಾಡಿಸಬೇಕು ಎಂದು ಹೇಳಿ ಗ್ಯಾಸ್ ಸಿಲಿಂಡರ್ ಬಳಿ ನಿಂತು ಮಹಿಳೆಯ ಫೋಟೋ ಪಡೆದುಕೊಂಡಿದ್ದಾನೆ. ನಂತರ ನಿಮ್ಮ ಅಡುಗೆ ಮನೆಯಲ್ಲಿ ಗಾಳಿ ಬೆಳಕು ಬರುತ್ತಿದೆಯೇ ಎಂದು ನೋಡಬೇಕು ಕೇಂದ್ರ ಸರ್ಕಾರದ ಆದೇಶ ಇದೆ ಎಂದು ಹೇಳಿದ್ದಾನೆ. ಹೀಗಾಗಿ ಆತನನ್ನು ಮನೆಯೊಳಗೆ ಮಹಿಳೆ ಬಿಟ್ಟಿದ್ದಾರೆ. ಈ ವೇಳೆ ಮಹಿಳೆಯನ್ನು ತಳ್ಳಿ, ಕಿರುಚಿದರೆ ಇಲ್ಲಿಯೇ ನಿನ್ನನ್ನು ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ, ಮಹಿಳೆಯ ಮುಖಕ್ಕೆ ಹೊಡೆದಿದ್ದು, ಎದೆ ಮತ್ತು ಮುಖಕ್ಕೆ ಚಾಕುವಿನಿಂದ ಇರಿದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಮಹಿಳೆಯ ದೂರಿನಂತೆ ಆರೋಪಿ ಮಹೇಶ್ ನನ್ನು ಪೊಲೀಸರು ಬಂಧಿಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: