ಇನ್ನು ಮುಂದೆ ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಊಟ ಹಾಕುವಂತಿಲ್ಲ: ಬರ್ತಿದೆ ಹೊಸ ರೂಲ್ಸ್! - Mahanayaka

ಇನ್ನು ಮುಂದೆ ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಊಟ ಹಾಕುವಂತಿಲ್ಲ: ಬರ್ತಿದೆ ಹೊಸ ರೂಲ್ಸ್!

street dogs
08/05/2024


Provided by

ಬೆಂಗಳೂರು: ಬೀದಿನಾಯಿಗಳಿಗೆ ಇನ್ನು ಮುಂದೆ ಎಲ್ಲೆಂದರಲ್ಲಿ ಊಟ ಹಾಕುವುದಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದ್ದು, ಬೀದಿನಾಯಿಗೆ ಊಟ ಹಾಕಲು ಹೊಸ ರೂಲ್ಸ್ ತರಲು ಮುಂದಾಗಿದೆ.

ಬೀದಿ ನಾಯಿಗಳಿಗೆ ತಮಗೆ ತೋಚಿದ ಜಾಗಗಳಲ್ಲಿ ಇಲ್ಲಿಯವರೆಗೆ ಸಾರ್ವಜನಿಕರು ಊಟ ಹಾಕುತ್ತಿದ್ದರು. ಬೀದಿ ನಾಯಿಗಳಿಗೆ ಊಟ ಹಾಕುವ ವಿಚಾರದಲ್ಲಿ ಸಾಕಷ್ಟು ಬಾರಿ ನೆರೆಹೊರೆಯ ಮನೆಗಳ ಜನರ ನಡುವೆ ಗಲಾಟೆಗಳು ನಡೆದಿರುವ ಪ್ರಕರಣಗಳು ನಡೆದಿತ್ತು. ಆದರೆ ಇದೀಗ ಬೀದಿ ನಾಯಿಗಳಿಗೆ ಊಟ ಹಾಕಲೆಂದೇ ಹೊಸ ರೂಲ್ಸ್ ತರಲು ಬಿಬಿಎಂಪಿ ಮುಂದಾಗಿದೆ ಎಂದು ವರದಿಯಾಗಿದೆ.

ಬೀದಿಗಳಲ್ಲಿ ನಾಯಿಗಳಿಗೆ ಊಟ ಹಾಕುವುದರಿಂದ ನಾಯಿಗಳು ರಸ್ತೆಯಲ್ಲಿ ಓಡಾಡುವ ಜನರ ಮೇಲೆ ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚು ಇವೆ. ಇಂತಹ ಅನೇಕ ಘಟನೆಗಳು ಈಗಾಗಲೇ ನಡೆದಿವೆ ಕೂಡ. ಹಾಗಾಗಿ ಬೆಳಗಿನ ಜಾವ 3 ರಿಂದ 4 ಗಂಟೆ ಅಥವಾ ರಾತ್ರಿ ಜನರ ಓಡಾಟ ಕಡಿಮೆ ಇದ್ದಾಗ ಮಾತ್ರ ಬೀದಿನಾಯಿಗಳಿಗೆ ಊಟ ಹಾಕುವಂತೆ ಪಾಲಿಕೆ ಸಲಹೆ ನೀಡುತ್ತಿದೆ. ಅಪಾರ್ಟ್ ಮೆಂಟ್ ಗಳ ಮುಂದೆ ಎಲ್ಲಿ, ಯಾವಾಗ ನಾಯಿಗಳಿಗೆ ಊಟ ಹಾಕಬೇಕು ಅಂತಾ ಬೋರ್ಡ್ ಹಾಕಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಬೀದಿನಾಯಿ ದಾಳಿ ಪ್ರಕರಣ ಕಡಿಮೆಗೊಳಿಸಲು ಇಂತಹ ಕ್ರಮವಹಿಸಲು ಬಿಬಿಎಂಪಿ ಮುಂದಾಗಿದೆ. ಆದ್ರೆ ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ