ಮತಗಟ್ಟೆಗೆ ಬಾಗಿಲು ಹಾಕಿ ಊಟಕ್ಕೆ ಕುಳಿತ ಚುನಾವಣಾ ಅಧಿಕಾರಿಗಳು! - Mahanayaka

ಮತಗಟ್ಟೆಗೆ ಬಾಗಿಲು ಹಾಕಿ ಊಟಕ್ಕೆ ಕುಳಿತ ಚುನಾವಣಾ ಅಧಿಕಾರಿಗಳು!

election
07/05/2024

ಧಾರವಾಡ: ಮತಗಟ್ಟೆಗೆ ಬಾಗಿಲು ಹಾಕಿದ ಚುನಾವಣಾ ಅಧಿಕಾರಿಗಳು ಮಧ್ಯಾಹ್ನ ಊಟ ಮಾಡಿದ ಘಟನೆ ನಡೆದಿದ್ದು, ಬಿಸಿಲಿನ ತಾಪದ ನಡುವೆಯೂ ಮತದಾನ ಮಾಡಲು ಮತದಾರರು ಕಾಯುವಂತ ಸ್ಥಿತಿ ನಿರ್ಮಾಣವಾದ ಘಟನೆ ಧಾರವಾಡ ಲೋಕಸಭೆ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನಡೆದಿದೆ.

ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿನ ಮತಗಟ್ಟೆ ನಂ. 180ರಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ ಸುಮಾರು ಅರ್ಧ ಗಂಟೆಗಳ ಕಾಲ ಮತಗಟ್ಟೆಗೆ ಬಾಗಿಲು ಹಾಕಿದ ಅಧಿಕಾರಿಗಳು ಊಟಕ್ಕೆ ಕುಳಿತಿದ್ದಾರೆ. ಇತ್ತ ಅಧಿಕಾರಿಗಳ ಊಟ ಮುಗಿಯುವವರೆಗೆ ಮತದಾರರು ಮತಗಟ್ಟೆಯ ಹೊರಗೆ ಕಾಯುವ ಸ್ಥಿತಿ ನಿರ್ಮಾಣವಾಯಿತು.

ಅಧಿಕಾರಿಗಳು ನಿಯಮ ಬಾಹಿರವಾಗಿ ಮತಗಟ್ಟೆಯಲ್ಲಿ ಮತದಾನ ಸ್ಥಗಿತಗೊಳಿಸಿ ಊಟಕ್ಕೆ ಕುಳಿತಿದ್ದಾರೆ. ತಕ್ಷಣವೇ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ, ಮತದಾನ ಆರಂಭದಿಂದ ಅಂತ್ಯದ ವರೆಗೂ ಮತದಾನ ಪ್ರಕ್ರಿಯೆ ನಿಲ್ಲಿಸುವಂತಿಲ್ಲ, ಮತದಾನಕ್ಕೆ ನಿಗದಿಪಡಿಸಿದ್ದ ಸಮಯದಲ್ಲಿ ಅರ್ಧಗಂಟೆ ವ್ಯರ್ಥವಾಗಿದೆ. ಹೀಗಾಗಿ ಅರ್ಧಗಂಟೆಗಳ ಕಾಲ ಹೆಚ್ಚುವರಿ ಮತದಾನಕ್ಕೆ ಸಮಯ ನೀಡಬೇಕು ಎಂದು ಮತದಾರರು ಒತ್ತಾಯಿಸಿದರು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ