ಆರು ದಿನ ಆಯ್ತು: ಇನ್ನೂ ಅಮೆರಿಕದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ ಬೆಂಕಿ! - Mahanayaka
10:17 PM Wednesday 15 - October 2025

ಆರು ದಿನ ಆಯ್ತು: ಇನ್ನೂ ಅಮೆರಿಕದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ ಬೆಂಕಿ!

14/01/2025

ಆರು ದಿನಗಳು ಕಳೆದ ಬಳಿಕವೂ ಅಮೆರಿಕಾದ ಲಾಸ್ ಎಂಜಲೀಸ್ ನಲ್ಲಿ ಉಂಟಾಗಿರುವ ಬೆಂಕಿ ಅನಾಹುತ ನಿಯಂತ್ರಣಕ್ಕೆ ಬಂದಿಲ್ಲ. ಈಗಾಗಲೇ 24 ಮಂದಿ ಸಾವಿಗೀಡಾಗಿದ್ದಾರೆ. 40,000 ಎಕರೆಗಿಂತಲೂ ಅಧಿಕ ಪ್ರದೇಶವನ್ನು ಬೆಂಕಿ ಆವರಿಸಿಕೊಂಡಿದೆ. ಇದರಿಂದಾಗಿ 13 ದಶಲಕ್ಷ ಜನರು ಸಂಕಟಕ್ಕೆ ಒಳಗಾಗಿದ್ದಾರೆ. 92,000 ಕ್ಕಿಂತಲೂ ಅಧಿಕ ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.


Provided by

89 ಸಾವಿರಕ್ಕಿಂತಲೂ ಅಧಿಕ ಮಂದಿ ಯಾವುದೇ ಸಂದರ್ಭದಲ್ಲಿ ಸ್ಥಳಾಂತರ ಗೊಳ್ಳುವುದಕ್ಕೆ ಸಿದ್ಧವಾಗಿ ಇರಬೇಕಾದ ಸ್ಥಿತಿಯಲ್ಲಿದ್ದಾರೆ. ವೈಭವೋಪೇತ ಮನೆಗಳೂ ಸೇರಿದಂತೆ 12,300 ರಷ್ಟು ಕಟ್ಟಡಗಳು ಬೆಂಕಿಗಾಗಿವೆ.

ಬೆಂಕಿಯಿಂದ ಅತಿ ಹೆಚ್ಚು ಅನಾಹುತಕ್ಕೆ ಒಳಗಾದ ಪಾಲಿಸೈಡ್ಸ್ ಎಂಬ ಪ್ರದೇಶದಲ್ಲಿಯೇ 23713 ರಷ್ಟು ಎಕರೆ ಭೂಮಿಯು ನಾಶವಾಗಿದೆ. ಇಲ್ಲಿ ಕೇವಲ 14 ಶೇಕಡಾ ದಷ್ಟು ಮಾತ್ರವೇ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲಾಗಿದೆ. 14,117 ಎಕರೆ ಪ್ರದೇಶವನ್ನು ನುಂಗಿ ಹಾಕಿರುವ ಐ ಟನ್ ಪ್ರದೇಶದಲ್ಲಿ ಕೇವಲ 33 ಶೇಕಡ ಬೆಂಕಿ ಮಾತ್ರ ನಿಯಂತ್ರಿಸಲಾಗಿದೆ. 799 ಎಕರೆಯನ್ನು ನಾಶ ಮಾಡಿರುವ ಹಾರ್ ಸ್ಟಿ ಪ್ರದೇಶದಲ್ಲಿ 97 %ಬೆಂಕಿ ನಿಯಂತ್ರಣಕ್ಕೆ ಬಂದಿದೆ.

ಈ ಬೆಂಕಿಯನ್ನು ಹಬ್ಬಿಸುತ್ತಿರುವ ಸ್ಯಾಂಟ್ ಅನ್ ಎಂಬ ಗಾಳಿಯ ವೇಗ ಹೆಚ್ಚಾಗುತ್ತಿರುವುದು ಅಮೆರಿಕವನ್ನು ಕಂಗೆಡಿಸಿದೆ. ಇನ್ನು ಮೂರು ದಿನಗಳ ಕಾಲ ಗಾಳಿಯ ವೇಗ ಹೆಚ್ಚಿರಲಿದೆ ಎಂದು ತಿಳಿದುಬಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ