ಟ್ರಕ್ಕಿಂಗ್ ಗೆ ತೆರಳಿ ರಾತ್ರಿ 2 ಗಂಟೆವರೆಗೂ ಕಾಡಿನಲ್ಲಿ ಸಿಲುಕಿದ ವಿದ್ಯಾರ್ಥಿಗಳು! - Mahanayaka

ಟ್ರಕ್ಕಿಂಗ್ ಗೆ ತೆರಳಿ ರಾತ್ರಿ 2 ಗಂಟೆವರೆಗೂ ಕಾಡಿನಲ್ಲಿ ಸಿಲುಕಿದ ವಿದ್ಯಾರ್ಥಿಗಳು!

chikkamagaluru
10/06/2025

ಚಿಕ್ಕಮಗಳೂರು :  ಟ್ರಕ್ಕಿಂಗ್ ಗೆ ಹೋಗಿದ್ದ  ಮೆಡಿಕಲ್ ಕಾಲೇಜಿನ 11 ವಿದ್ಯಾರ್ಥಿಗಳು ಬಲ್ಲಾಳರಾಯನ ದುರ್ಗಾ ಕಾಡಿನಲ್ಲಿ ದಾರಿ ತಿಳಿಯದೇ ಅಲೆದಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನದುರ್ಗಾದಲ್ಲಿ ನಡೆದಿದೆ.

ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು 5 ಹುಡುಗಿಯರು  ಟ್ರಕ್ಕಿಂಗ್ ಹೊರಟಿದ್ರು, ಬಲ್ಲಾಳರಾಯನ ದುರ್ಗಾ ಕಡೆಯಿಂದ ಟಿಕೆಟ್ ಬುಕ್ ಮಾಡಿ, ಬಂಡಾಜೆ ಭಾಗದಿಂದ ಟ್ರಕ್ಕಿಂಗ್ ತೆರಳಿದ್ದರು. ಆದರೆ ದಾರಿ ತಿಳಿಯದೆ ಕಾಡಲ್ಲಿ ಅತಂತ್ರವಾಗಿ ನಿತ್ರಾಣಗೊಂಡಿದ್ದರು.

ಪೊಲೀಸರು—ಸ್ಥಳಿಯರು–ಅರಣ್ಯ ಇಲಾಖೆ ಸಿಬ್ಬಂದಿ 6 ಗಂಟೆಗಳ ಕಾಲ ಹುಡುಕಿ ಕೊನೆಗೂ ಪತ್ತೆ ಹಚ್ಚಿದ್ದಾರೆ.  ಬಾಳೂರು ಠಾಣಾಧಿಕಾರಿ ದಿಲೀಪ್ ಕುಮಾರ್ ಹಾಗೂ ಪೊಲೀಸರ ಜೊತೆ ಸ್ನೇಕ್ ಆರೀಫ್,  ಮಧ್ಯರಾತ್ರಿ 2 ಗಂಟೆವರೆಗೂ ಶೋಧ ನಡೆಸಿದರು.

ಕಾಡಲ್ಲಿ ಸಿಕ್ಕ ವಿದ್ಯಾರ್ಥಿಗಳನ್ನು ಸಿಬ್ಬಂದಿ ಸುರಕ್ಷಿತವಾಗಿ ತಂದು ವಾಪಸ್ ಕಳುಹಿಸಿದ್ದಾರೆ. ಸಂಕಷ್ಟದಲ್ಲಿ ಸಿಲುಕಿದ ತಮ್ಮನ್ನು  ರಕ್ಷಿಸಿದ ಪೊಲೀಸರು ಹಾಗೂ ಸ್ಥಳೀಯರಿಗೆ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ