ಬೋಯಿಂಗ್‌ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಗೆ ಹಾನಿ: ಸುನೀತಾ ವಿಲಿಯಮ್ಸ್‌ ಮರಳಿ ಭೂಮಿಗೆ - Mahanayaka
12:44 AM Thursday 30 - October 2025

ಬೋಯಿಂಗ್‌ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಗೆ ಹಾನಿ: ಸುನೀತಾ ವಿಲಿಯಮ್ಸ್‌ ಮರಳಿ ಭೂಮಿಗೆ

07/09/2024

ಹಾನಿಗೊಳಗಾದ ಬೋಯಿಂಗ್‌ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯು ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಲ್ಲದೆ ಶನಿವಾರ ಮರಳಿ ಭೂಮಿಗೆ ತಲುಪಿದೆ. ಬಾಹ್ಯಾಕಾಶ ಯಾನದ ಇತಿಹಾಸದಲ್ಲಿಯೇ ಸಿಬ್ಬಂದಿಯೊಂದಿಗೆ ಉಡಾವಣೆಗೊಂಡು, ಅವರಿಲ್ಲದೆ ಖಾಲಿ ಭೂಮಿಗೆ ವಾಪಸಾದ ಮೊದಲ ನೌಕೆ ಎನಿಸಿದೆ.

ಈ ನೌಕೆಯನ್ನು ಜೂನ್ 5ರಂದು ಉಡಾವಣೆ ಮಾಡಲಾಗಿತ್ತು. ನಾಸಾ ಗಗನಯಾತ್ರಿಕರಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನೌಕೆಯು ಕರೆದೊಯ್ದಿತ್ತು.

ಆದರೆ ಐಎಸ್‌ಎಸ್‌ ತಲುಪಿದ ಕೆಲವೇ ಸಮಯದಲ್ಲಿ ಸ್ಟಾರ್‌ಲೈನರ್‌ನಲ್ಲಿ ಹೀಲಿಯಂ ಸೋರಿಕೆ ಹಾಗೂ ರಿಯಾಕ್ಷನ್ ಕಂಟ್ರೋಲ್ ಥ್ರಸ್ಟರ್‌ಗಳಲ್ಲಿನ ಸಮಸ್ಯೆಗಳು ಸೇರಿದಂತೆ ಅನೇಕ ತಾಂತ್ರಿಕ ಸಮಸ್ಯೆಗಳನ್ನು ಎಂಜಿನಿಯರ್‌ಗಳು ಪತ್ತೆ ಮಾಡಿದ್ದರು.

ಈ ಅನಿರೀಕ್ಷಿತ ಸನ್ನಿವೇಶ ನಾಸಾಕ್ಕೆ ಇಕ್ಕಟ್ಟು ಉಂಟುಮಾಡಿತ್ತು. ಕೆಲವೇ ದಿನಗಳ ಮಟ್ಟಿಗಾಗಿ ಈ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರೂ, ಅವರ ಸುರಕ್ಷಿತ ವಾಪಸಾತಿ ನಾಸಾಕ್ಕೆ ತಲೆನೋವು ಉಂಟುಮಾಡಿತ್ತು. ಸ್ಟಾರ್‌ಲೈನರ್‌ನಲ್ಲಿಯೇ ಅವರು ಭೂಮಿಗೆ ವಾಪಸಾಗುವುದು ಸುರಕ್ಷಿತವಲ್ಲ ಎಂಬ ಆತಂಕ ಉಂಟಾಗಿತ್ತು. ಹೀಗಾಗಿ ಸುನೀತಾ ಮತ್ತು ವಿಲ್ಮೋರ್ ಅವರನ್ನು ಭೂಮಿಗೆ ವಾಪಸ್ ಕರೆತರಲು ಪ್ರತಿಸ್ಪರ್ಧಿ ಸ್ಪೇಸ್ ಎಕ್ಸ್ ನೆರವು ಪಡೆಯುವುದು ಅನಿವಾರ್ಯವಾಯಿತು.

ಸ್ಪೇಸ್ ಎಕ್ಸ್‌ನ ಕ್ರ್ಯೂ ಡ್ರ್ಯಾಗನ್ ನೌಕೆಯು ಇಬ್ಬರು ಗಗನಯಾನಿಗಳನ್ನು ಮರಳಿ ಕರೆತರಲಿದೆ. ಆದರೆ ಅದಕ್ಕಾಗಿ 2025ರ ಫೆಬ್ರವರಿಯವರೆಗೂ ಕಾಯಬೇಕಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ