ತುಳು ಚಿತ್ರನಟನ ಬರ್ಬರ ಹತ್ಯೆ | ಪ್ಲ್ಯಾಟ್ ನಲ್ಲಿಯೇ ಹತ್ಯೆ ನಡೆಸಿದ ದುಷ್ಕರ್ಮಿಗಳು - Mahanayaka

ತುಳು ಚಿತ್ರನಟನ ಬರ್ಬರ ಹತ್ಯೆ | ಪ್ಲ್ಯಾಟ್ ನಲ್ಲಿಯೇ ಹತ್ಯೆ ನಡೆಸಿದ ದುಷ್ಕರ್ಮಿಗಳು

21/10/2020

ಬಂಟ್ವಾಳ: ತುಳು ಚಿತ್ರ ನಟ ಸುರೇಂದ್ರ ಬಂಟ್ವಾಳ್  ಅವರನ್ನು ಬಿ.ಸಿ,ರೋಡ್ ನ ಫ್ಲ್ಯಾಟ್ ವೊಂದರಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ತುಳು ಚಿತ್ರ ಚಾಲಿಪೊಲೀಲು ಚಿತ್ರದಲ್ಲಿ ನಟಿಸಿದ್ದ ಬಂಟ್ವಾಳ್ ಅವರನ್ನು ಹತ್ಯೆ ಮಾಡಲಾಗಿದೆ.


Provided by

ಬಂಟ್ವಾಳ ಬಂಡಾರಿಬೆಟ್ಟು ನಿವಾಸಿಯಾಗಿರುವ ಸುರೇಂದ್ರ ಬಂಟ್ವಾಳ್ ಅವರು ಬಿ.ಸಿ.ರೋಡ್ ನ ಫ್ಯ್ಲಾಟ್ ನಲ್ಲಿರುವಾಗಲೇ ಅವರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮಂಗಳವಾರ ರಾತ್ರಿ ಕೊಲೆಯಾಗಿರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಈ ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ. ಈ ಕೊಲೆಯಲ್ಲಿ ಸುರೇಂದ್ರ ಬಂಟ್ವಾಳ್ ಜೊತೆಗಾರರೇ ಈ ಹತ್ಯೆ ಮಾಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.


Provided by

ಇತ್ತೀಚಿನ ಸುದ್ದಿ