ಸುರೇಂದ್ರ ಬಂಟ್ವಾಳ್ ಹತ್ಯೆಗೆ ಭೂಗತ ಲೋಕದ ನಂಟು? | ಆಪ್ತನ ಮೊಬೈಲ್ ಸ್ವಿಚ್ಡ್ ಆಫ್ - Mahanayaka

ಸುರೇಂದ್ರ ಬಂಟ್ವಾಳ್ ಹತ್ಯೆಗೆ ಭೂಗತ ಲೋಕದ ನಂಟು? | ಆಪ್ತನ ಮೊಬೈಲ್ ಸ್ವಿಚ್ಡ್ ಆಫ್

22/10/2020

ಬಂಟ್ವಾಳ: ತುಳು ಚಿತ್ರ ನಟ-ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಅವರ ಹತ್ಯೆಗೆ ಭೂಗತ ಲೋಕದ ನಂಟು ಇದೆ ಎಂದು ಹೇಳಲಾಗುತ್ತಿದ್ದು, ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಹೆಸರು ಕೇಳಿ ಬಂದಿದೆ. ಆದರೆ ಇದು ಇನ್ನೂ ಸ್ಪಷ್ಟಗೊಂಡಿಲ್ಲ.

ಸುರೇಂದ್ರ ಶೆಟ್ಟಿಯನ್ನು ಮಂಗಳವಾರ ಸಂಜೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಘಟನೆ ಬುಧವಾರ ಮಧ್ಯಾಹ್ನ ಬೆಳಕಿಗೆ ಬಂದಿತ್ತು. ಸಿಸಿ ಕ್ಯಾಮರಾ ದಾಖಲೆಯಲ್ಲಿ ಇಬ್ಬರು ಹೆಲ್ಮೆಟ್ ಧರಿಸಿ ಫ್ಲ್ಯಾಟ್ ಗೆ ಹೋಗಿರುವ ದೃಶ್ಯ ಸೆರೆಯಾಗಿದೆ ಎಂದು ವರದಿಯಾಗಿದೆ.

ಇನ್ನೂ ಸುರೇಂದ್ರ ಆಪ್ತ ಸತೀಶ್ ಕುಲಾಲ್ ನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಇನ್ನಷ್ಟು ಅನುಮಾನಗಳು ವ್ಯಕ್ತವಾಗಿದೆ. ಈ ಕೊಲೆಯಲ್ಲಿ ಸತೀಶ್ ನ ಪಾತ್ರವಿದೆ ಎನ್ನುವ ಮಾತುಗಳು ನಿನ್ನೆಯೇ ವ್ಯಾಪಕವಾಗಿ ಕೇಳಿ ಬಂದಿತ್ತು. ಇಂದು ಮೊಬೈಲ್ ಸ್ವಿಚ್ಡ್ ಆಫ್ ಆಗಿರುವುದು, ಈ ಅನುಮಾನಕ್ಕೆ ಇನ್ನಷ್ಟು ಒತ್ತು ನೀಡಿದಂತಾಗಿದೆ.


Provided by

ಇನ್ನೂ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಸುರೇಂದ್ರ ಬಂಟ್ವಾಳ್ ಬಡ್ಡಿ, ಚಕ್ರ ಬಡ್ಡಿ ದಂಧೆ ನಡೆಸುತ್ತಿದ್ದ, ಅಮಾಯಕರಿಗೆ ಬಡ್ಡಿಯ ಮೇಲೆ ಬಡ್ಡಿ ಹಾಕುತ್ತಿದ್ದ. ಬಡವರ ಆಸ್ತಿ ಜಪ್ತಿ ಮಾಡಿ, ಜನರಿಗೆ ದಿಕ್ಕಿಲ್ಲದಂತೆ ಮಾಡಿದ್ದಾನೆ ಎಂಬಂತಹ ಪೋಸ್ಟ್ ಗಳು ಸುರೇಂದ್ರ ಹತ್ಯೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸುರೇಂದ್ರನ ಹತ್ಯೆಗೆ ನಿಜವಾದ ಕಾರಣ ಏನು ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

ಇತ್ತೀಚಿನ ಸುದ್ದಿ