11 ವರ್ಷಗಳ ನಂತರ ಸಂಸದರು ಧ್ವನಿಯೆತ್ತಿದ್ದಾರೆ, ನಮ್ಮನ್ನು ಮೋದಿ ಬಳಿಗೆ ಕರೆದುಕೊಂಡು ಹೋಗಿ: ಸೌಜನ್ಯ ತಾಯಿ ಕುಸುಮಾವತಿ ವಿಶೇಷ ಮನವಿ - Mahanayaka

11 ವರ್ಷಗಳ ನಂತರ ಸಂಸದರು ಧ್ವನಿಯೆತ್ತಿದ್ದಾರೆ, ನಮ್ಮನ್ನು ಮೋದಿ ಬಳಿಗೆ ಕರೆದುಕೊಂಡು ಹೋಗಿ: ಸೌಜನ್ಯ ತಾಯಿ ಕುಸುಮಾವತಿ ವಿಶೇಷ ಮನವಿ

sowjanya mother
28/08/2023


Provided by

ನನ್ನ ಪುತ್ರಿಯ ಕೊಲೆ ಪ್ರಕರಣದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ನ್ಯಾಯ ಕೇಳುತ್ತಿದ್ದೇನೆ. ಅದರೆ ನನಗೆ ನ್ಯಾಯ ಸಿಗಲಿಲ್ಲ. ನನಗೆ ನ್ಯಾಯ ಒದಗಿಸಬೇಕು ಎಂದು ಸೌಜನ್ಯ ತಾಯಿ ಕುಸುಮಾವತಿ ಒತ್ತಾಯಿಸಿದ್ದಾರೆ.

ಅವರು ರವಿವಾರ ಬಿಜೆಪಿ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಬೆಳ್ತಂಗಡಿ ಮಿನಿ ವಿಧಾನಸೌಧ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ನನ್ನ ಮಗಳ ಸಾವಿಗೆ ನ್ಯಾಯಕ್ಕಾಗಿ ಸಂಸದರು ಈವರೆಗೆ ಧ್ವನಿಯೆತ್ತಿರಲಿಲ್ಲ ಇದೀಗ ಹನ್ನೊಂದು ವರ್ಷದ ಬಳಿಕ ಧ್ವನಿ ಎತ್ತಿದ್ದಾರೆ. ನನಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಬೇಕು. ಅದಕ್ಕೆ ವ್ಯವಸ್ಥೆಯನ್ನು ನೀವು ಮಾಡಬೇಕು ಎಂದು ಆಗ್ರಹಿಸಿದರು.

ವೀರೇಂದ್ರ ಹೆಗ್ಗಡೆಯವರನ್ನು ಸಂಸದ ಸ್ಥಾನದಿಂದ ಕೆಳಗಿಳಿಸಿ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ನಿಶ್ಚಲ್ ಜೈನ್, ಧೀರಜ್ ಕೆಲ್ಲ, ಉದಯ ಜೈನ್, ಮಲ್ಲಿಕ್‌ ಜೈನ್ ಬಗ್ಗೆ ಅನುಮಾನವಿದೆ ಅವರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಕಾರ್ಕಳದ ಶಾಸಕ ಸುನೀಲ್ ಕುಮಾರ್, ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ