ಸಹಾಯ: ಮಿಚಾಂಗ್ ಚಂಡಮಾರುತ ಪೀಡಿತ 4 ಜಿಲ್ಲೆಗಳ ಶಾಲೆಗಳಿಗೆ 1.90 ಕೋಟಿ ಘೋಷಿಸಿದ ತಮಿಳುನಾಡು ಸರ್ಕಾರ - Mahanayaka

ಸಹಾಯ: ಮಿಚಾಂಗ್ ಚಂಡಮಾರುತ ಪೀಡಿತ 4 ಜಿಲ್ಲೆಗಳ ಶಾಲೆಗಳಿಗೆ 1.90 ಕೋಟಿ ಘೋಷಿಸಿದ ತಮಿಳುನಾಡು ಸರ್ಕಾರ

11/12/2023


Provided by

ಮಿಚಾಂಗ್ ಚಂಡಮಾರುತದ ನಂತರದ ಹಿನ್ನೆಲೆಯಲ್ಲಿ, ತಮಿಳುನಾಡು ಸರ್ಕಾರವು ನಾಲ್ಕು ಜಿಲ್ಲೆಗಳ ಶಾಲೆಗಳಲ್ಲಿ ಸ್ವಚ್ಛತಾ ಅಭಿಯಾನಕ್ಕಾಗಿ 1.90 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು ಮತ್ತು ತಿರುವಳ್ಳೂರು ಈ ಹಂಚಿಕೆಯಿಂದ ಪ್ರಯೋಜನ ಪಡೆಯಲಿದೆ. ಡಿಸೆಂಬರ್ ಮೊದಲ ವಾರದಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದ ಶೈಕ್ಷಣಿಕ ಸೌಲಭ್ಯಗಳನ್ನು ಪುನಃಸ್ಥಾಪಿಸುವ ಗುರಿಯನ್ನು ಇದು ಹೊಂದಿದೆ.

ಚಂಡಮಾರುತದ ಸಮಯದಲ್ಲಿ ಚೆನ್ನೈ ತೀವ್ರ ಜಲಾವೃತ ಮತ್ತು ಅಗತ್ಯ ಸೇವೆಗಳ ಅಡಚಣೆಯನ್ನು ಎದುರಿಸಿತ್ತು. ಇದಕ್ಕೆ ರಾಜ್ಯ ಸರ್ಕಾರವು ಪರಿಹಾರ ಪ್ರಯತ್ನಗಳೊಂದಿಗೆ ಸ್ಪಂದಿಸಿತು.

ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಅವರು ಖಾಸಗಿ ಆಸ್ಪತ್ರೆಗಳೊಂದಿಗೆ ಸರ್ಕಾರದ ಸಹಯೋಗವನ್ನು ಎತ್ತಿ ತೋರಿಸಿದರು. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 800 ಕ್ಕೂ ಹೆಚ್ಚು ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿದ್ದಾರೆ. ಈ ಉಪಕ್ರಮದ ಬಗ್ಗೆ ಮಾತನಾಡಿದ ಅವರು, “ನಾವು ಏಳು ಖಾಸಗಿ ಆಸ್ಪತ್ರೆಗಳೊಂದಿಗೆ ಜೈ ಜೋಡಿಸಿದ್ದೇವೆ.

ಸೈದಾಪೇಟೆಯ ಅಡಯಾರ್ ನದಿಯ ದಡದಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದ್ದೇವೆ. ಅಗತ್ಯವಿದ್ದರೆ, ಇದನ್ನು ಚೆನ್ನೈನ ಇತರ ಸ್ಥಳಗಳಿಗೂ ವಿಸ್ತರಿಸಬಹುದು” ಎಂದಿದ್ದಾರೆ.

ಈ ಮಧ್ಯೆ, ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ನಿಂತ ನೀರನ್ನು ನಿಭಾಯಿಸಲು ಮತ್ತು ಅವಶೇಷಗಳನ್ನು ತೆರವುಗೊಳಿಸಲು ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದೆ. ಇದು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಪುನಃಸ್ಥಾಪನಾ ಪ್ರಕ್ರಿಯೆಗೆ ಕೊಡುಗೆ ನೀಡಿದೆ.

6,000 ರೂ.ಗಳ ಆರ್ಥಿಕ ನೆರವು ಸೇರಿದಂತೆ ಪರಿಹಾರ ಕ್ರಮಗಳನ್ನು ಒಂದು ವಾರದೊಳಗೆ ಸಂತ್ರಸ್ತರಿಗೆ ವಿತರಿಸಲಾಗುವುದು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ