ಮರಾಠರ ಮಾತ್ರವಲ್ಲ, ತಮಿಳರ ನಿಗಮವೂ ಮಾಡುತ್ತೇವೆ | ಡಿಸಿಎಂ ಅಶ್ವತ್ ನಾರಾಯಣ್
04/12/2020
ಬೆಂಗಳೂರು: ಮರಾಠರಿಗೆ ಮಾತ್ರವಲ್ಲ ತಮಿಳರಿಗೂ ನಿಗಮ ಮಾಡುತ್ತೇವೆ ಎಂದು ಡಿಸಿಎಂ ಅಶ್ವತ್ ನಾರಾಯಣ್ ಅವರು ಹೇಳಿದ್ದು, ನಾಳೆ ಕನ್ನಡ ಪರ ಸಂಘಟನೆಗಳು, ಮರಾಠರ ನಿಗಮ ಮಂಡಳಿ ವಿರುದ್ಧ ಕರ್ನಾಟಕ ಬಂದ್ ಗೆ ಕರೆ ನೀಡಿದ ಬೆನ್ನಲ್ಲೇ ಡಿಸಿಎಂ ಅಶ್ವತ್ ನಾರಾಯಣ್ ಹೇಳಿಕೆ ನೀಡಿದ್ದಾರೆ.
ಈ ಮರಾಠಿಗರು ನಮ್ಮವರು ಹಾಗಾಗಿ ಅವರ ಅಭಿವೃದ್ಧಿ ನಿಗಮ ಮಾಡಲಾಗಿದೆ. ನಾಳೆ ದಿನ ತಮಿಳರು ಬಂದು ನಮಗೂ ನಿಗಮ ಬೇಕು ಎಂದು ಕೇಳಿದರೂ ಮಾಡುತ್ತೇವೆ ಎಂದು ಅಶ್ವತ್ ನಾರಾಯಣ್ ಹೇಳಿದರು.
ತಮಿಳಿಗರು ಕೂಡ ನಮ್ಮ ರಾಜ್ಯದಲ್ಲಿ 10 ವರ್ಷಗಳಿಂದ ಇದ್ದಾರೆ. ಇಲ್ಲಿ 10 ವರ್ಷಗಳಿಂದ ಇದ್ದರೆ ಅವರು ಕನ್ನಡಿಗರು ಎಂದಾಗುತ್ತದೆ ಎಂದ ಅವರು ಮುಂದಿನ ದಿನಗಳಲ್ಲಿ ತಮಿಳರ ಅಭಿವೃದ್ಧಿ ನಿಗಮವನ್ನೂ ರಚನೆ ಮಾಡುವ ಬಗ್ಗೆ ಸುಳಿವು ನೀಡಿದರು.


























