ಪೊಲೀಸ್ ಕ್ವಾಟ್ರರ್ಸ್ ನ ಹೊಸ ಕಟ್ಟಡದಿಂದ ಹಾರಿ ಗೃಹಿಣಿ ಆತ್ಮಹತ್ಯೆ - Mahanayaka

ಪೊಲೀಸ್ ಕ್ವಾಟ್ರರ್ಸ್ ನ ಹೊಸ ಕಟ್ಟಡದಿಂದ ಹಾರಿ ಗೃಹಿಣಿ ಆತ್ಮಹತ್ಯೆ

04/12/2020

ಬೆಂಗಳೂರು: ಪೊಲೀಸ್ ಕ್ವಾಟ್ರರ್ಸ್ ನ ಹೊಸ ಕಟ್ಟಡದಿಂದ ಜಿಗಿದು ವಿಜಯಪುರ ಮೂಲದ  ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

ಸಿದ್ದಮ್ಮ ಅಲಿಯಾಸ್ ಸುಜಾತಾ(29) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ. ಕೆಂಗೇರಿ ಉಪನಗರದ 6ನೇ ಕ್ರಾಸ್ ನಲ್ಲಿ ವಾಸವಾಗಿದ್ದ ಸುಜಾತಾ, ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಎಸ್ ಪಿಎಸ್ ಶಾಲೆಯ  ಹಿಂಭಾಗದ ಪೊಲೀಸ್ ಕ್ವಾಟ್ರರ್ಸ್ ನ ಹೊಸ ಕಟ್ಟಡದ ಬಳಿಗೆ ಬಂದು 7ನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೆಂಗೇರಿ ಠಾಣೆ ಪೊಲೀಸರು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಹಿಳೆಯ ಸಾವಿಗೆ ಕಾರಣಗಳೇನು? ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ೀ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಇತ್ತೀಚಿನ ಸುದ್ದಿ